ಕರ್ನಾಟಕ

karnataka

ETV Bharat / state

ರಾಜಧಾನಿಗೆ ವರುಣನ ಆಗಮನ...ಗುಡುಗು ಮಿಂಚು ಸಹಿತ ಪೂರ್ವ ಮುಂಗಾರು ಜೋರು - ಬೆಂಗಳೂರು ಮಳೆ ಸುದ್ದಿ

ರಾಜಧಾನಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಿದೆ.

Heavy rain in bengaluru
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ

By

Published : Apr 9, 2020, 8:49 PM IST

ಬೆಂಗಳೂರು: ಇಂದು ಸಂಜೆ ಸಿಲಿಕಾನ್​ ಸಿಟಿಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ.

ನಗರದ ಲಾಲ್ ಬಾಗ್, ಮೆಜೆಸ್ಟಿಕ್, ಜಯನಗರ, ಬನಶಂಕರಿ, ಯಶವಂತಪುರ, ಸುಮ್ಮನಹಳ್ಳಿ, ವಿಜಯನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆರಡು ದಿನ ಮಳೆಯಾಗಲಿದೆ. ನಿನ್ನೆ ರಾತ್ರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಿತ್ತು. ಇನ್ನು ಎರಡು ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ತಾಪಮಾನ ಏರಿಕೆಯಾಗಿದ್ದರಿಂದ, ಪೂರ್ವ ಮುಂಗಾರು ಮಳೆಯಾಗ್ತಿದೆ.

ABOUT THE AUTHOR

...view details