ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುರುವಾರವೂ ಸಂಜೆ ವೇಳೆ ಮಳೆ ಮುಂದುವರಿಯಿತು. ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ.
ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ... ಧರೆಗುರುಳಿದ ಮರಗಳು - undefined
ಬೆಂಗಳೂರಲ್ಲಿ ವರುಣನ ಅಬ್ಬರಕ್ಕೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯೊಂದರಲ್ಲೇ ಮೂರು ಮರಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಜಾಲಹಳ್ಳಿ ಕ್ರಾಸ್, ಆರ್ ಆರ್ ನಗರ, ಜ್ಞಾನಾಕ್ಷಿ ಶಾಲೆ ಬಳಿಯೂ ಮರ ಬಿದ್ದಿವೆ. ಸಂಜೆ ವೇಳೆ ಆರಂಭವಾದ ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಲ್ಲೇಶ್ವರಂನ ಸಂಪಿಗೆ ರಸ್ತೆಯೊಂದರಲ್ಲೇ ಮೂರು ಮರಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಜಾಲಹಳ್ಳಿ ಕ್ರಾಸ್, ಆರ್ ಆರ್ ನಗರ, ಜ್ಞಾನಾಕ್ಷಿ ಶಾಲೆ ಬಳಿಯೂ ಮರ ಬಿದ್ದಿವೆ. ಸಂಜೆ ವೇಳೆ ಆರಂಭವಾದ ಮಳೆಯಿಂದಾಗಿ ಶಿವಾಜಿನಗರ, ಮಲೇಶ್ವರಂ, ವಸಂತನಗರ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಳೆಯಿಂದ ಚುನಾವಣೆಗೆ ಯಾವುದೇ ಅಡ್ಡಿ ಆಗಿಲ್ಲ. ಆದ್ರೆ ವಾಹನ ಸವಾರರು ಪರದಾಡುವಂತಾಗಿದೆ. ಹೆಬ್ಬಾಳ ಬಳಿಯ ಎನ್ ಹೆಚ್ 4 ರಲ್ಲಿ ನೀರು ನಿಂತಿದ್ದು, ನ್ಯಾಷನಲ್ ಹೈವೇ ವಿಭಾಗಕ್ಕೆ ತಿಳಿಸಲಾಗಿದೆ ಎಂದು ಪಾಲಿಕೆ ಕಂಟ್ರೋಲ್ ರೂಂ ನ ಸಿಬ್ಬಂದಿ ಮಾಹಿತಿ ನೀಡಿದರು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ವಾತಾವರಣದಲ್ಲಿ ಒತ್ತಡ ಕಡಿಮೆಯಾಗಿದ್ದರಿಂದ ಮಳೆ ಸುರಿದಿದೆ. ಇನ್ನೂ ಇದೇ ರೀತಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.