ಬೆಂಗಳೂರು: ಉದ್ಯಾನನಗರಿಯಲ್ಲಿ ಇತ್ತೀಚೆಗೆ ಮಳೆರಾಯನ ಸದ್ದು ಕಡಿಮೆ ಆಗಿತ್ತು. ಆದರೆ ಇಂದು ಸಂಜೆ ಸುರಿದ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಂಗಳೂರಿನಲ್ಲಿ ಮತ್ತೆ ಅಬ್ಬರಿಸಿದ ವರುಣ: ಜನರಲ್ಲಿ ಹೆಚ್ಚಿದ ಆತಂಕ - ವರುಣನ ಆರ್ಭಟ ಅಧಿಕ
ರಾಜ್ಯದಲ್ಲಿ ವರುಣನ ಆರ್ಭಟ ಅಧಿಕವಾಗಿರುವ ಈ ಸಂದರ್ಭದಲ್ಲಿ ಉದ್ಯಾನ ನಗರಿಯಲ್ಲಿ ಇದರ ಸದ್ದು ಕಡಿಮೆಯಾದಂತಾಗಿತ್ತು. ಆದರೆ ಇಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಸುರಿದ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಉತ್ತರ ಕರ್ನಾಟಕದ ಜನರಂತೆಯೇ ಬೆಂಗಳೂರಿಗರು ಆತಂಕಕ್ಕೆ ಸಿಲುಕಿದ್ದಾರೆ.
![ಬೆಂಗಳೂರಿನಲ್ಲಿ ಮತ್ತೆ ಅಬ್ಬರಿಸಿದ ವರುಣ: ಜನರಲ್ಲಿ ಹೆಚ್ಚಿದ ಆತಂಕ](https://etvbharatimages.akamaized.net/etvbharat/prod-images/768-512-4079292-thumbnail-3x2-sanju.jpg)
ಮತ್ತೆ ಶುರುವಾಯ್ತು ಬೆಂಗಳೂರಿನಲ್ಲಿ ವರುಣನ ಆರ್ಭಟ
ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್ ಸೇರಿ ಬೆಂಗಳೂರಿನ ಬಹುತೇಕ ಕಡೆ ಜೋರು ಮಳೆಯಾಗಿದ್ದು, ಉತ್ತರ ಕರ್ನಾಟಕದಂತೆಯೇ ಭಾರಿ ಮಳೆ ಆಗಲಿದೆಯಾ ಎಂಬ ಭೀತಿ ಬೆಂಗಳೂರಿಗರನ್ನು ಕಾಡುತ್ತಿದೆ.
ಬೆಂಗಳೂರಲ್ಲಿ ಮತ್ತೆ ಶುರುವಾಯ್ತ ವರುಣನ ಆರ್ಭಟ
ಇನ್ನು ವೆಸ್ಟ್ ಆಫ್ ಕಾರ್ಡ್ ರೋಡ್ , ಮಹಾಲಕ್ಷ್ಮೀ ಲೇಔಟ್ ಭಾಗಗಳಲ್ಲೂ ಮಳೆಯಾಗಿದ್ದು, ಇತ್ತ ಮಳೆಯಿಂದಾಗಿ ಮನೆಗೆ ತೆರಳಲು ಆಗದೇ ರಸ್ತೆ ಇಕ್ಕೆಲಗಳಲ್ಲೇ ಶಾಲಾ ಮಕ್ಕಳು ನಿಂತಿದ್ದ ದೃಶ್ಯ ಕಂಡು ಬಂತು. ಮಳೆಯಿಂದಾಗಿ ವಿಜಯನಗರ ಆದಿಚುಂಚನಗಿರಿ ಮಠದ ಎದುರು ಮರವೊಂದು ಬಿದ್ದಿದ್ದು, ಇನ್ನು ಒಂದು ವಾರ ಕಾಲ ಹೀಗೆ ಮಳೆ ಅಬ್ಬರಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.