ಬೆಂಗಳೂರು:ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಇಂದು ಕೂಡ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ.
ನಗರದ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ರಾಜಾಜಿನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೆಜೆಸ್ಟಿಕ್ ಶಾಂತಿನಗರ, ಸುಧಾಮನಗರ ಸೇರಿದಂತೆ ಹಲವೆಡೆ ಗುಡುಗು ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.
ಧರೆಗುರುಳಿದ ಮರ:
ಮಳೆಗೆ ಮಲ್ಲೇಶ್ವರದ 17 ನೇ ಕ್ರಾಸ್ನಲ್ಲಿ ಬೃಹತ್ ಮರಮೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ್ದಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದಾಗಿ ರಸ್ತೆಯಲ್ಲೇ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.
ಶೇಷಾದ್ರಿಪುರಂನಲ್ಲಿ ನದಿಯಂತೆ ಹರಿದ ಮಳೆನೀರು:
ಶೇಷಾದ್ರಿಪುರಂನಲ್ಲಿ ನದಿಯಂತೆ ಹರಿದ ಮಳೆನೀರು ಶೇಷಾದ್ರಿಪುರಂನಲ್ಲೂ ಜೋರು ಮಳೆಯಾಗಿದ್ದು, ಅಂಡರ್ ಪಾಸ್ ಬಳಿ ಮಳೆ ನೀರು ನದಿಯಂತೆ ಹರಿಯುತ್ತಿರುವುದು ಕಂಡುಬಂತು. ಮೂರ್ನಾಲ್ಕು ಅಡಿ ನೀರು ನಿಂತಿದೆ. ಇನ್ನು ಜೂ.03ರವರೆಗೆ ಮಳೆ ನಿರಂತರವಾಗಿ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದ್ದು, ಸಂಜೆ ವೇಳೆ ಜನರು ಹೊರ ಬರದಂತೆ ಎಚ್ಚರಿಸಿದ್ದಾರೆ.