ಬೆಂಗಳೂರು: ಬಿಬಿಎಂಪಿಯ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಭಾರೀ ಮಳೆಗೆ ನೆಲಕ್ಕೆ ಉರುಳಿರುವ ಮರಗಳ ಬಗ್ಗೆ ಮಾಹಿತಿ ಪಡೆದರು.
ಬೆಂಗಳೂರಲ್ಲಿ ವರುಣನ ಅಬ್ಬರ... ಪಾಲಿಕೆಗೆ ಖುದ್ದು ಕರೆ ಮಾಡಿ ಮಾಹಿತಿ ಪಡೆದ ಡಿಸಿಎಂ - undefined
ಉಪ ಮುಖ್ಯಮಂತ್ರಿ ಪರಮೇಶ್ವರ್ ಸ್ವತಃ ತಾವೇ ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಮಳೆ ಅವಾಂತರದ ಬಗ್ಗೆ ಮಾಹಿತಿ ಪಡೆದರು.
![ಬೆಂಗಳೂರಲ್ಲಿ ವರುಣನ ಅಬ್ಬರ... ಪಾಲಿಕೆಗೆ ಖುದ್ದು ಕರೆ ಮಾಡಿ ಮಾಹಿತಿ ಪಡೆದ ಡಿಸಿಎಂ](https://etvbharatimages.akamaized.net/etvbharat/prod-images/768-512-3391402-thumbnail-3x2-hjklhjhjjpg.jpg)
ಡಿಸಿಎಂ ಪರಮೇಶ್ವರ್
ಕರೆ ಮಾಡಿದ್ದ ಹಿನ್ನೆಲೆ ಈವರೆಗೂ ಆರು ಕಡೆ ಮರಗಳು ಬಿದ್ದಿರುವ ಬಗ್ಗೆ ಮಾಹಿತಿ ತಿಳಿದಿದೆ. ಜಯಮಹಲ್, ಕೆಂಗೇರಿ, ಹೊಯ್ಸಳ ವೃತ್ತ, 11ನೇ ಕ್ರಾಸ್ ಮಲ್ಲೇಶ್ವರಂ, 14ನೇ ಕ್ರಾಸ್ ಮಲ್ಲೇಶ್ವರಂ, 15ನೇ ಕ್ರಾಸ್ ಮಲ್ಲೇಶ್ವರಂ, 16ನೇ ಕ್ರಾಸ್ ಮಲ್ಲೇಶ್ವರಂನಲ್ಲಿ ನೆಲಕ್ಕೆ ಉರುಳಿವೆ.
ಇನ್ನೂ, ಈ ಸಂಬಂಧ ದೂರುಗಳನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಲು ಆದೇಶಿದ್ದಾರೆ, ಅದರಂತೆ ಸಂಬಂಧ ಪಟ್ಟವರು ಕ್ರಮವಹಿಸಲಾಗುತ್ತಿದೆ ಅಂತ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.