ಕರ್ನಾಟಕ

karnataka

By

Published : Mar 2, 2021, 8:00 PM IST

ETV Bharat / state

ದಿನೇ-ದಿನೆ ಏರುತ್ತಿರುವ ಶಬ್ದ ಮಾಲಿನ್ಯ: ಕಡಿವಾಣ ಹಾಕದಿದ್ರೆ ಅಪಾಯ ಕಟ್ಟಿಟ್ಟಬುತ್ತಿ!

ರಾಜ್ಯದಲ್ಲಿ ದಿನೇ ದಿನೆ ಏರುತ್ತಿರುವ ಶಬ್ದ ಮಾಲಿನ್ಯ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ? ಅನ್ನೋದನ್ನು ನೋಡೋದಾದರೆ...ಇಲ್ಲಿದೆ ಸಮಗ್ರ ಮಾಹಿತಿ.

heavy noise pollution leads to problem in state
ದಿನೇ-ದಿನೆ ಏರುತ್ತಿರುವ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕದಿದ್ರೆ ಅಪಾಯ ಕಟ್ಟಿಟ್ಟಬುತ್ತಿ!

ರಾಜ್ಯದಲ್ಲಿ ದಿನೇ-ದಿನೆ ಶಬ್ದ ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಅದೇನೇ ನಿಯಮ ತಂದರೂ ಒಂದಿಷ್ಟು ಪ್ರದೇಶಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿದಂತಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಶಬ್ದ ಮಾಲಿನ್ಯದ ಪ್ರಮಾಣ ಹೇಗಿದೆ? ಎಂಬುದರ ಸಂಪೂರ್ಣ ಅವಲೋಕನ ಇಲ್ಲಿದೆ.

ಶಬ್ದ ಮಾಲಿನ್ಯ ಸಮಸ್ಯೆ, ರಾಜ್ಯದ ಪರಿಸ್ಥಿತಿಯೇನು?

ದೇಶದಲ್ಲೇ ಅತಿ ಹೆಚ್ಚು ಶಬ್ದ ಮಾಲಿನ್ಯವಿರುವ ನಗರಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಒಂದು. ಕಳೆದ ವರ್ಷ ನಿಗದಿತ ಮಟ್ಟ ಮೀರಿ ಅಧಿಕ ಪ್ರಮಾಣದಲ್ಲಿ ಶಬ್ದಮಾಲಿನ್ಯ ದಾಖಲಾಗಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ. ನಗರದ ವಾಣಿಜ್ಯ ಪ್ರದೇಶ, ವಸತಿ ಪ್ರದೇಶ, ಸೂಕ್ಷ್ಮ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಇಷ್ಟೇ ಪ್ರಮಾಣದಲ್ಲಿ ಶಬ್ದವಿರಬೇಕು ಎಂಬ ನಿಯಮವಿದ್ದರೂ ಈ ಪ್ರದೇಶಗಳಲ್ಲಿನ ಶಬ್ದ ತನ್ನ ಇತಿಮಿತಿ ಮೀರಿದೆ. ಇನ್ನು ಶೇ.40ರಷ್ಟು ವಾಯುಮಾಲಿನ್ಯಕ್ಕೆ ಸಂಚಾರ ದಟ್ಟಣೆಯೇ ಕಾರಣವಂತೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶಬ್ದ ಮಾಲಿನ್ಯದ ಪ್ರಮಾಣ ನಿಗದಿತ ಮಟ್ಟದಲ್ಲಿರುವುದು ಆಶಾದಾಯಕ ಬೆಳವಣಿಗೆ. ಆದ್ರೆ, ಹಬ್ಬ ಹರಿದಿನಗಳಂತಹ ಸಂದರ್ಭದಲ್ಲಿ ಮಾತ್ರ ಮೈಕ್​ ಡಿಜೆಗಳಿಂದಲೇ ಕಿರಿಕಿರಿ ಉಂಟಾಗಿ ಹೆಚ್ಚಿನ ದೂರುಗಳು ಬರುತ್ತವೆ ಎಂದು ವಾಯುಮಾಲಿನ್ಯ ನಿಯಂತ್ರಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲೂ ಶಬ್ದ ಮಾಲಿನ್ಯ ಹೆಚ್ಚಾಗಿದ್ದು, ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇದನ್ನು ನಿಯಂತ್ರಿಸಬೇಕಾದ ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸದ್ಯದ ಮಟ್ಟಿಗೆ ನಿಷ್ಕ್ರಿಯವಾಗಿದೆಯೆಂಬ ಆರೋಪವಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆಯನ್ನು ಸಂಚಾರ ಸಮಸ್ಯೆ ಜೊತೆಗೆ ವಾಹನಗಳ ಕರ್ಕಶ ಶಬ್ದ ಎಡ ಬಿಡದೆ ಕಾಡುತ್ತಿದೆ. ಜಾಗೃತಿ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆ ನಡೆಸುತ್ತಿದೆಯಾದರೂ ಮಾಲಿನ್ಯ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.

ABOUT THE AUTHOR

...view details