ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಗ್ರೀನ್ ಕಾರಿಡಾರ್ ಮೂಲಕ ಮತ್ತೊಂದು ಜೀವಂತ ಹೃದಯ ರವಾನೆ ಆಗಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 42 ವರ್ಷದ ವ್ಯಕ್ತಿಯನ್ನು ಡಿಸೆಂಬರ್ 14 ರಂದು ಆಸ್ಟರ್ ಆರ್.ವಿ. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೆದುಳು ನಿಷ್ಕ್ರಿಯ ಗೊಂಡಿರುವುದಾಗಿ ವೈದ್ಯರು ತಿಳಿಸಿದರು. ಇತ್ತ ಕುಟುಂಬವು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿತು.
ಹೃದಯವನ್ನು ನಾರಾಯಣ ಹೆಲ್ತ್ ಸಿಟಿಯ ತಜ್ಞ ವೈದ್ಯರ ತಂಡವು ಡಾ. ವರುಣ್ ಶೆಟ್ಟಿ - ಕನ್ಸಲ್ಟೆಂಟ್ ಕಾರ್ಡಿಯೋಥೊರಾಸಿಕ್ ಮತ್ತು ಹಾರ್ಟ್ ಟ್ರಾನ್ಸ್ ಫ್ಲಾಂಟ್ ಸರ್ಜರಿ, ಡಾ. ಟಿ. ಕುಮರನ್, ಕನ್ಸಲ್ಟೆಂಟ್ ಕಾರ್ಡಿಯೋಥೊರಾಸಿಕ್ ಮತ್ತು ಹಾರ್ಟ್ ಟ್ರಾನ್ಸ್ ಪ್ಲಾಂಟ್ ಸರ್ಜರಿ ಮತ್ತು ಉಮಾದೇವಿ, ಕಸಿ ಸಂಯೋಜಕರು ಮತ್ತು ಸುಗಂಧ ದ್ರವ್ಯ ತಜ್ಞರು ಇಂದು ಬೆಳಗ್ಗೆ ಬೆಂಗಳೂರು ನಗರ ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತ್ ಗೌಡ ಆಶ್ರಯದಲ್ಲಿ ನಾರಾಯಣ ಹೆಲ್ತ್ ಸಿಟಿಗೆ ಹೃದಯವನ್ನು ರವಾನಿಸಲಾಯಿತು.
ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
ರವಿಕಾಂತ ಗೌಡರು ಗ್ರೀನ್ ಕಾರಿಡಾರ್ ರಚಿಸುವ ಮೂಲಕ ಅಂಗಾಂಗ ರವಾನೆಗೆ ಬೆಂಬಲ ನೀಡಿದರು. ಜೀವಂತ ಹೃದಯವನ್ನು ಹೊತ್ತು ಹೊರಟ ಆಂಬುಲೆನ್ಸ್ ಆಸ್ಟರ್ ಆರ್.ವಿ. ಆಸ್ಪತ್ರೆ ಜೆಪಿ ನಗರದಿಂದ ಬೆಳಗ್ಗೆ 11:23 ಕ್ಕೆ ಹೊರಟು ಬೆಳಗ್ಗೆ 11:46 ಕ್ಕೆ ನಾರಾಯಣ ಹೆಲ್ತ್ ಸಿಟಿಗೆ ತಲುಪಿತು. ಗರಿಷ್ಠ ಸಮಯದಲ್ಲಿ 20 ಕಿ.ಮೀ ದೂರವನ್ನು ಕೇವಲ 23 ನಿಮಿಷಗಳಲ್ಲಿ ಕ್ರಮಿಸಿ ಆಸ್ಪತ್ರೆ ತಲುಪಿತು.