ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ರಾಜ್ಯದ 300 ಜನ ಭಾಗಿಯಾಗಿದ್ದರು. ಕರ್ನಾಟಕ ಮೂಲದ 300 ಜನರಲ್ಲಿ, 12 ಜನರ ವರದಿ ನೆಗೆಟಿವ್ ಬಂದಿದೆ ಅಂತಾ ಆರೋಗ್ಯ ಸಚಿವ ಬಿ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಇದು ಒಳ್ಳೆಯ ಸುದ್ದಿ..ನಿಜಾಮುದ್ದೀನ್ ಮಸೀದಿ ಪ್ರಾರ್ಥನೆಯಲ್ಲಿದ್ದ ರಾಜ್ಯದ 12 ಮಂದಿಗೆ ಕೊರೊನಾ ನೆಗೆಟಿವ್.. - ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
ಇದರಲ್ಲಿ 62 ಇಂಡೋನೇಷ್ಯಾ ಹಾಗೂ ಮಲೇಶಿಯಾದ ಪ್ರಜೆಗಳೂ ಭಾಗಿಯಾಗಿದ್ದರು. ಈ 62 ಜನ ಕರ್ನಾಟಕಕ್ಕೆ ಬಂದಿದ್ದಾರೆ.
ಆರೋಗ್ಯ ಇಲಾಖೆಯು 300 ಜನರ ಮಾಹಿತಿ ಪಡೆದಿದೆ. ಇದರಲ್ಲಿ 40 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಈ 40 ಜನರಲ್ಲಿ 12 ಜನರಿಗೆ ಕೊರೊನಾ ನೆಗೆಟಿವ್ ವರದಿ ಲಭ್ಯವಾಗಿದೆ.
ಇದರಲ್ಲಿ 62 ಇಂಡೋನೇಷ್ಯಾ ಹಾಗೂ ಮಲೇಶಿಯಾದ ಪ್ರಜೆಗಳೂ ಭಾಗಿಯಾಗಿದ್ದರು. ಈ 62 ಜನ ಕರ್ನಾಟಕಕ್ಕೆ ಬಂದಿದ್ದಾರೆ. ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಟ್ವೀಟ್ ಮೂಲಕ ಆರೋಗ್ಯ ಸಚಿವ ಬಿ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.
Last Updated : Apr 1, 2020, 11:30 AM IST