ಕರ್ನಾಟಕ

karnataka

ETV Bharat / state

ಆರೋಗ್ಯ ಸಚಿವ ಸುಧಾಕರ್​ಗೆ ಕೋವಿಡ್ ಪಾಸಿಟಿವ್ ದೃಢ

ಆರೋಗ್ಯ ಸಚಿವ ಡಾ. ಸುಧಾಕರ್​ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸಚಿವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

health-minister-sudhakar-tested-covid-positive
ಆರೋಗ್ಯ ಸಚಿವ ಸುಧಾಕರ್​ಗೆ ಕೋವಿಡ್ ಪಾಸಿಟಿವ್ ದೃಢ

By

Published : Jun 2, 2022, 10:56 PM IST

ಬೆಂಗಳೂರು:ಆರೋಗ್ಯ ಸಚಿವ ಡಾ. ಸುಧಾಕರ್​ಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಸಣ್ಣ ಪ್ರಮಾಣದ ಜ್ವರ ಬಂದಿದ್ದರಿಂದ ತಪಾಸಣೆ ಮಾಡಿಕೊಂಡಾಗ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ.

ಈ ಬಗ್ಗೆ ಸಚಿವ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೋವಿಡ್​​ನ ಮೂರು ಅಲೆಗಳ ಸಂದರ್ಭಗಳಲ್ಲಿಯೂ ಸೋಂಕಿನಿಂದ ಪಾರಾಗಿ ಈಗ ಪಾಸಿಟಿವ್​ ಬಂದಿದೆ ಎಂದು ತಿಳಿಸಿದ್ದಾರೆ. ಕೋವಿಡ್​​ನ ಕೆಲ ಲಕ್ಷಣಗಳು ತಮ್ಮಲ್ಲಿ ಕಾಣಿಸಿಕೊಂಡಿವೆ. ಹೋಂ ಐಸೋಲೇಷನ್​​ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಪೂರ್ಣ ಲಸಿಕೆ ಪಡೆದಿರುವುದರಿಂದ ಅಪಾಯದಿಂದ ಪಾರಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದಿರುವವರು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಚಿವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಸರ್ಕಾರಕ್ಕೆ ಮತ್ತೊಂದು ಖಡಕ್​ ಪತ್ರ ಬರೆದ ಸಾಹಿತಿ ದೇವನೂರು ಮಹಾದೇವ

ABOUT THE AUTHOR

...view details