ಬೆಂಗಳೂರು:ಕಳೆದ ಕೆಲವು ದಿನಗಳಿಂದ ಬ್ಲ್ಯಾಕ್ ಫಂಗಸ್ ಕೆಲವು ವ್ಯಕ್ತಿಗಳಿಗೆ ಬಂದಿದೆ. ಇದರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಲಾಗಿದೆ. ಬ್ಲ್ಯಾಕ್ ಫಂಗಸ್‌ಗೆ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಜೊತೆಗೆ ಇದೀಗ ಬ್ಲ್ಯಾಕ್ ಫಂಗಸ್ನಿಂದ ಹೆಚ್ಚು ಆತಂಕ ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಇಂದು ಸಚಿವ ಸುಧಾಕರ್ ಆರೋಗ್ಯ ಸೌಧದಲ್ಲಿ ತಜ್ಞರೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಮಾಹಿತಿ ನೀಡಿದ ಸಚಿವರು, ಬ್ಲ್ಯಾಕ್ ಫಂಗಸ್‌ಗೆ ರಚಿಸಿರುವ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಡಾ. ಸತೀಶ್, ಡಾ.ಭುಜಂಗಶೆಟ್ಟಿ, ಡಾ. ಸುಜಾತ ರಾಥೋಡ್, ಡಾ. ಬಾಲಸುಬ್ರಹ್ಮಣ್ಯಂ ಕುಮಾರ್, ಡಾ.ರವಿ, ಡಾ. ಪ್ರದೀಪ್ ರಂಗಪ್ಪ ಸೇರಿ ಹಲವರಿದ್ದಾರೆ ಎಂದರು.
ಸಚಿವ ಸುಧಾಕರ್ ಆರೋಗ್ಯ ಸೌಧದಲ್ಲಿ ತಜ್ಞರೊಂದಿಗೆ ಸಭೆ ನಡೆಸಿದರು ರಾಜ್ಯದಲ್ಲಿ 97 ಜನರಿಗೆ ಬ್ಲ್ಯಾಕ್ ಫಂಗಸ್ ಬಂದಿದ್ದು, ವಿಕ್ಟೋರಿಯಾ ಸೋಂಕಿತರ ವಾರ್ಡ್ ನಾಲ್ಕು ಜನರು ಮೃತರಾಗಿದ್ದಾರೆ. ಒಬ್ಬರು ಕೋಲಾರ, 3 ಬೆಂಗಳೂರಿನವರು ಬ್ಲ್ಯಾಕ್ ಫಂಗಸ್ನಿಂದ ಮೃತರಾಗಿದ್ದಾರೆ. ಇನ್ನು ಸೋಂಕು ಸಂಬಂಧ ಕೇಂದ್ರ ಸರ್ಕಾರದಿಂದ ಕೆಲವು ಮಾರ್ಗಸೂಚಿ ನೀಡಲಾಗಿದೆ. ಕೆಲವು ರಾಜ್ಯದಲ್ಲಿ ಪ್ರೋಟೋಕಾಲ್ ಬಂದಿದ್ದು, ಇಂದು 5 ಗಂಟೆಯಷ್ಟರಲ್ಲಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡುತ್ತಾರೆ ಎಂದು ತಿಳಿಸಿದರು.
ಯಾರಿಗೆ ಅನ್ ಕಂಟ್ರೋಲ್ ಡಯಾಬಿಟಿಸ್ ಇರುತ್ತೋ, ಅವರಿಗೆ ಕೋವಿಡ್ ಬಂದು, ಅತಿಯಾಗಿ ಸ್ಟಿರಾಯ್ಡ್ ತೆಗೆದುಕೊಂಡಿರುತ್ತಾರೋ ಅವರಿಗೆ ಸೋಂಕು ಬರಲಿದೆ. ಅವರು ಡಿಸ್ಚಾರ್ಜ್ ಆದ ಬಳಿಕ ಕಂಟ್ರೋಲ್‌ನಲ್ಲಿ ಇರಬೇಕು. ಯಾಕೆಂದರೆ ಅತಿ ಬೇಗ ಸೆಕೆಂಡರಿ ಇನ್ಫೆಕ್ಷನ್‌ಗೆ ತುತ್ತಾಗುತ್ತಾರೆ ಎಂದರು.
ಕ್ಯಾನ್ಸರ್ ಇರುವವರು, ಅಂಗಾಗ ಕಸಿ ಮಾಡಿಸಿಕೊಂಡಿರುವವರಿಗೆ, ಹೆಚ್‌ಐವಿ ಇನ್ಫೆಕ್ಷನ್ ಇರುವವರಿಗೂ ಬರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಸೋಂಕು ಕೆಲವರಲ್ಲಿ ಹೆಚ್ಚಾಗಿ ಬಂದಿದೆ ಅದನ್ನು ಒಪ್ಪಿಕೊಳ್ಳುತ್ತೇನೆ. ಕೋವಿಡ್‌ನಿಂದಲೇ ಬಹಳಷ್ಟು ಜನ ಆತಂಕದಲ್ಲಿದ್ದಾರೆ. ಹೀಗಾಗಿ, ಪ್ರಾರಂಭದಲ್ಲೇ ಮೂಗು, ಗಂಟಲು, ಕಿವಿಯನ್ನು ತೋರಿಸಿಕೊಳ್ಳಬೇಕು. ಎಲ್ಲ ವೈದ್ಯರು ಇಂತಹ ವ್ಯಕ್ತಿಗಳನ್ನು ಗಮನಹರಿಸಿ ನೋಡಬೇಕು.ಇದು ನೋಟಿಫೈಡ್ ಡಿಸೀಸ್, ಇದನ್ನು ಖಾಸಗಿಯಾಗಿ ಇಟ್ಟುಕೊಳ್ಳುವಂತಿಲ್ಲ. ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಟ್ಯಾಪ್ ನೀರು ಬಳಕೆಯಿಂದಲ್ಲೂ ಫಂಗಸ್: ಟ್ಯಾಪ್ ನೀರು ಬಳಸುವುದರಿಂದ ಫಂಗಸ್ ಬರುತ್ತೆ ಅನ್ನೋ ಅನುಮಾನ ನಮಗೆ ಇದೆ.ಈ ಸೋರ್ಸ್ ಪತ್ತೆ ಹಚ್ಚುವ ಕಾರ್ಯವನ್ನು ನಾವು ಮಾಡ್ತಿದ್ದೇವೆ. ಎಲ್ಲಿ ಆಕ್ಸಿಜನ್ ಫಿಲ್ ಆಗ್ತಿದೆ. ಅದೆಲ್ಲವನ್ನೂ ಚೆಕ್ ಮಾಡಿ ನೀಡಲು ಸೂಚಿಸಿದ್ದೇವೆ. ಮುನ್ನೆಚ್ಚರಿಕೆ ತೆಗೆದುಕೊಂಡು ಕ್ರಮ ಕೈಗೊಂಡ್ರೆ ಒಳ್ಳೆಯದು ಅಂದರು.
ಈಗಾಗಲೇ ಮೆಡಿಸನ್ ಕೊಡಬೇಕಿದ್ದ, ಅವರಿಗಾಗಿ 40 - 60 ವಯಲ್ಸ್ ಬೇಕಿದ್ದು, ನಮಗೆ 1050 ರಷ್ಟು ವಯಲ್ಸ್‌ಗೆ ಕೇಂದ್ರದಿಂದ ಮಂಜೂರಾತಿ ಬಂದಿದೆ. ಐಸೋಕೋನೋಸೋಲ್, ಫೋಸೋಕೋನೋಸೋಲ್ ಗೆ 20 ಸಾವಿರ ವಯಲ್ಸ್‌ಗೆ ನಾವು ಬೇಡಿಕೆ ಇಟ್ಟಿದ್ದೇವೆ. ಈ ಮೆಡಿಸನ್ ಕೂಡಾ ನೀಡಲಾಗುವುದು ಅಂತ ತಿಳಿಸಿದರು.
ಫಂಗಸ್‌ಗೆ 5 ಕಡೆ ಚಿಕಿತ್ಸೆ: ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್, ಜಿಮ್ಸ್, ಕಿಮ್ಸ್ ಹಾಗೂ ಕೆಎಂಸಿ ಹಾಗೂ ವೆನ್‌ಲಾಕ್ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಕೊಡಲು ನೋಟಿಫೈ ಮಾಡಲಾಗಿದ್ದು, 5 ಕಡೆಗಳಲ್ಲಿ ಚಿಕಿತ್ಸೆ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.
ಓದಿ:ರಾಜ್ಯದಲ್ಲಿ ತೌಕ್ತೆ ಅಬ್ಬರ ಏನೆಲ್ಲಾ ಹಾನಿ... ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಇಲ್ಲಿದೆ