ಕರ್ನಾಟಕ

karnataka

ETV Bharat / state

ಬೋರಿಂಗ್​ ಆಸ್ಪತ್ರೆಯಲ್ಲಿ ರಾಮುಲುಗೆ ಚಿಕಿತ್ಸೆ, ಇಮ್ಯುನಿಟಿ ಹೆಚ್ಚಿಸಲು ಡಯಟ್​ ಫುಡ್​ - Boring Hospital Bangalore

ಸ್ವಲ್ಪ ಜ್ವರ ಮತ್ತು ಕೆಮ್ಮು ಇದ್ದು, ಅದಕ್ಕೆ ಪೂರಕ ಚಿಕತ್ಸೆ ಆರಂಭಿಸಲಾಗಿದೆ. ವೈದ್ಯರು ಯಾವುದೇ ಆತಂಕದ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಸಚಿವ ರಾಮುಲು ಆಸ್ಪತ್ರೆಯಲ್ಲಿ ನೀಡುವ ಡಯಟ್ ಫುಡ್‌ ಸೇವಿಸಲಿದ್ದಾರೆ..

Health Minister
ಆರೋಗ್ಯ ಸಚಿವ ಬಿ.ಶ್ರೀರಾಮುಲು

By

Published : Aug 9, 2020, 9:55 PM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ಆರಂಭಿಕ ಹಂತದ ವೈದ್ಯಕೀಯ ತಪಾಸಣೆ ಮುಗಿಸಲಾಗಿದೆ.

ಸದ್ಯ ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಯಲ್ಲಿ ಸಾಮಾನ್ಯರಿಗೆ ನೀಡುವ ಚಿಕಿತ್ಸೆಯನ್ನೇ ಸಚಿವರಿಗೂ ನೀಡಲಾಗುತ್ತಿದೆ. ಬೇಸಿಕ್ ಟೆಸ್ಟ್​​ಗಳು ಮುಗಿದಿದ್ದು, ಚಿಕಿತ್ಸೆ ಈಗ ಶುರುವಾಗಿದೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲುಗೆ ಚಿಕಿತ್ಸೆ ಆರಂಭ

ಸ್ವಲ್ಪ ಜ್ವರ ಮತ್ತು ಕೆಮ್ಮು ಇದ್ದು, ಅದಕ್ಕೆ ಪೂರಕ ಚಿಕತ್ಸೆ ಆರಂಭಿಸಲಾಗಿದೆ. ವೈದ್ಯರು ಯಾವುದೇ ಆತಂಕದ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಸಚಿವ ರಾಮುಲು ಆಸ್ಪತ್ರೆಯಲ್ಲಿ ನೀಡುವ ಡಯಟ್ ಫುಡ್‌ ಸೇವಿಸಲಿದ್ದಾರೆ. ವೈದ್ಯರ ಸಲಹೆಯಂತೆ ಆಹಾರ ತೆಗೆದುಕೊಳ್ಳಲಿದ್ದಾರೆ ಎಂದು ಶ್ರೀರಾಮುಲು ಕಚೇರಿ ಮಾಹಿತಿ ನೀಡಿದೆ.

ABOUT THE AUTHOR

...view details