ಯಲಹಂಕ:ಬೆಂಗಳೂರಿನ ರಮಡ ರೆಸಾರ್ಟ್ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಮೂವರು ವೈದ್ಯರ ತಂಡ ರೆಸಾರ್ಟ್ಗೆ ಭೇಟಿ ನೀಡಿದೆ.
ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ: ಆ್ಯಂಬುಲೆನ್ಸ್ ಜೊತೆಯಲ್ಲೇ ರೆಸಾರ್ಟ್ಗೆ ಬಂದ ವೈದ್ಯರು - ಮಧ್ಯಪ್ರದೇಶ ಬಂಡಾಯ ಶಾಸಕರು
ರಮಡ ರೆಸಾರ್ಟ್ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು ವೈದ್ಯರ ತಂಡ ರೆಸಾರ್ಟ್ಗೆ ಭೇಟಿ ನೀಡಿದೆ.
![ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ: ಆ್ಯಂಬುಲೆನ್ಸ್ ಜೊತೆಯಲ್ಲೇ ರೆಸಾರ್ಟ್ಗೆ ಬಂದ ವೈದ್ಯರು Health issue to madhya pradesh Rebel MLA,ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ](https://etvbharatimages.akamaized.net/etvbharat/prod-images/768-512-6425337-thumbnail-3x2-brm.jpg)
ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ
ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ
ಮಧ್ಯಪ್ರದೇಶ ಬಂಡಾಯ ಶಾಸಕರು ಯಲಹಂಕ ಬಳಿಯ ರಮಾಡ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದು. ಮಧ್ಯಪ್ರದೇಶ ರಾಜಕೀಯ ಅಸ್ಥಿರತೆಗೆ ಕಾರಣವಾಗಿದ್ದಾರೆ. ಸದ್ಯ ರಮಾಡ ಹೊಟೇಲ್ನಲ್ಲಿ 22 ಬಂಡಾಯ ಶಾಸಕರು ತಂಗಿದ್ದಾರೆ. ಮೂವರು ವೈದ್ಯರ ತಂಡ ಆ್ಯಂಬುಲೆನ್ಸ್ ಸಮೇತ ಹೋಟೆಲ್ ಒಳ ಹೋಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಬಂಡಾಯ ಶಾಸಕರಲ್ಲಿ ಒಬ್ಬರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇಸಿಜಿ ಮಾಡುವ ಉಪಕರಣದೊಂದಿಗೆ ವೈದ್ಯರ ತಂಡ ಒಳಗೆ ಹೋಗಿದೆ. ಬಂಡಾಯ ಶಾಸಕರ ಆರೋಗ್ಯದ ದೃಷ್ಟಿಯಿಂದ ಆ್ಯಂಬುಲೆನ್ಸ್ ಮತ್ತು ವೈದ್ಯರ ತಂಡ ಹೋಟೆಲ್ನಲ್ಲೇ ಇರಲಿದೆ ಎಂದು ಹೇಳಲಾಗಿದೆ.
Last Updated : Mar 16, 2020, 4:22 PM IST