ಬೆಂಗಳೂರು:ಕೊರೊನಾ ಸೋಂಕಿತ ರೋಗಿಗಳಿಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾವುದೇ ಗುಣಲಕ್ಷಣಗಳು ಇಲ್ಲದ ಸೋಂಕಿತರು 10ನೇ ದಿನಕ್ಕೆ ಡಿಸ್ಚಾರ್ಜ್ ಆಗಬಹುದು. ಬಳಿಕ 14 ದಿನಗಳ ಕಾಲ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಆಗಬೇಕು ಎಂದು ಹೇಳಿದೆ.
ಗುಣಲಕ್ಷಣಗಳು ಇಲ್ಲದ ಸೋಂಕಿತನಿಗೆ 7ನೇ ದಿನ ಮತ್ತೊಮ್ಮೆ ಟೆಸ್ಟ್ ಮಾಡಲಾಗುತ್ತೆ. ಆ ಸಂದರ್ಭದಲ್ಲಿ ನೆಗೆಟಿವ್ ಬಂದ್ರೆ 10 ದಿನದಲ್ಲಿ ಡಿಸ್ವಾರ್ಜ್ ಮಾಡಲಾಗುತ್ತೆ. ಕೊನೆ ಮೂರು ದಿನಗಳಲ್ಲಿ ವ್ಯಕ್ತಿ ಆರೋಗ್ಯಯುತವಾಗಿ ಉಸಿರಾಡುತ್ತಿರಬೇಕು, ಜ್ವರ, ನೆಗಡಿ, ಕೆಮ್ಮಿನ ಲಕ್ಷಣಗಳು ಇರಬಾರದು. ಮೂರು ದಿನ ಸತತವಾಗಿ ಸ್ಕ್ರೀನಿಂಗ್ ಮಾಡಲಾಗುತ್ತೆ. ಈ ವೇಳೆ ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ರೆ ಬಿಡುಗಡೆ ಮಾಡಲಾಗುತ್ತೆ.