ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ರೂಪಾಂತರಿ ಒಮಿಕ್ರಾನ್‌ನಿಂದ ಉಂಟಾಗಿರುವ 3ನೇ ಅಲೆಯನ್ನ ಸಮರ್ಪಕ ನಿರ್ವಹಣೆಗಾಗಿ, ಇದೀಗ ಟೆಸ್ಟಿಂಗ್, ಐಸೋಲೇಷನ್ ಹಾಗು ಕ್ವಾರಂಟೈನ್ಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿದೆ.
ಪ್ರಮುಖವಾಗಿ ಸಾಮಾನ್ಯ ಜನರಿಗೆ ಟೆಸ್ಟಿಂಗ್ನಲ್ಲಿ ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಕಡ್ಡಾಯವಾಗಿ ಱಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು (ಒಟ್ಟು ಟೆಸ್ಟ್ಗಳ ಸುಮಾರು 30% ರಷ್ಟು) ಹಾಗು ಱಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಫಲತಾಂಶವಿರುವ ಮಾದರಿಗಳನ್ನು ಐಸಿಎಂಆರ್ ಶಿಷ್ಟಾಚಾರದಂತೆ, ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು.
ಮನೆಗಳಲ್ಲಿ ಹಾಗು ಕಚೇರಿ/ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿರುವ ಪ್ರಾಥಮಿಕ ಕಾಂಟಾಕ್ಟ್ಗಳು, ಸೋಂಕಿನ ಲಕ್ಷಣ ರಹಿತರು, ಎಲ್ಲಾ ವಯೋಮಾನದವರು ಹಾಗು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನೂ ಸಹ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಲಾಗಿದೆ.
ಐಸೋಲೇಷನ್..
ಕೋವಿಡ್ ಪರೀಕ್ಷೆಯ ಫಲಿತಾಂಶವು ಹೊರಬಂದ ದಿನದಿಂದ ಅನ್ವಯವಾಗುವಂತೆ 7ನೇ ದಿನಕ್ಕೆ ಹೋಂ ಐಸೋಲೇಷನ್ ಅವಧಿಯು ಪೂರ್ಣಗೊಳ್ಳುತ್ತದೆ. ಈ ಅವಧಿಯ ಕೊನೆಯ 3 ದಿನಗಳು ನಿರಂತರವಾಗಿ ಜ್ವರ ಹಾಗು ಇತರೆ ಲಕ್ಷಣಗಳು ಇರಬಾರದು. ಆಗ ಹೋಂ ಐಸೋಲೇಷನ್‌ನಿಂದ ಬಿಡುಗಡೆಗೊಳಿಸಲು ಮರುಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ.
ಹೈ ರಿಸ್ಕ್ ಕಾಂಟ್ಯಾಕ್ಟ್‌ಗಳಿಗೆ ಕ್ವಾರೆಂಟೈನ್..
7 ದಿನಗಳ ಹೋಂ ಕ್ವಾರಂಟೈನ್ ಹಾಗು ಹೋಂ ಕ್ಯಾರಂಟೈನ್ನಿಂದ ಬಿಡುಗಡೆಗೊಳಿಸಲು ಮರು ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಫ್ರಂಟ್ ಲೈನ್ ಕಾರ್ಯಕರ್ತರು, ಆಡಳಿತಗಾರರು, ಸಾಂವಿಧಾನಿಕ ಕಾರ್ಯನಿರ್ವಾಹಕರು (Administrative, Statutory and Constitutional Functionaries) ಇವರಿಗೆ ಪ್ರತ್ಯೇಕ ಟೆಸ್ಟಿಂಗ್, ಐಸೋಲೇಷನ್, ಕ್ವಾರಂಟೈನ್ ನಿಗದಿ ಮಾಡಲಾಗಿದೆ.
ಕೋವಿಡ್ -19 ಸೋಂಕಿನ ಗುಣ ಲಕ್ಷಣಗಳನ್ನು ಹೊಂದಿರುವ ಆರೋಗ್ಯ ಸಿಬ್ಬಂದಿ..
ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು. ಸೋಂಕಿನ ಲಕ್ಷಣ ರಹಿತ / ಸೌಮ್ಯ ಲಕ್ಷಣಗಳನ್ನು ಹೊಂದಿದವರು 5 ದಿನಗಳವರೆಗೆ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್‌ಗಳಲ್ಲಿರಬೇಕು. ಸೋಂಕಿನ ಲಕ್ಷಣ ರಹಿತರು ಈ ಅವಧಿಯ ಕೊನೆಯ 3 ದಿನಗಳು ಜ್ವರ ಇಲ್ಲದಿರುವುದು ಹಾಗು ಕೊಠಡಿಯ ಸಾಮಾನ್ಯ ಸ್ಥಿತಿಯಲ್ಲಿ ಆಕ್ಸಿಜನ್ ಸ್ಯಾಚುರೇಶನ್ನ ಪ್ರಮುಖ 94% ಅಥವಾ ಅದಕ್ಕಿಂತ ಹೆಚ್ಚಿದ್ದಲ್ಲಿ ಐಸೋಲೇಷನ್‌ನಿಂದ ಬಿಡುಗಡೆಗೊಳಿಸಬಹುದು.
ಇಂಥವರು ಮುಂದಿನ 5 ದಿನಗಳ ಅವಧಿಯಲ್ಲಿ ಯಾವಾಗಲೂ ಮಾಸ್ಕ್ ಧರಿಸುವುದು ( ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿ ಪಿಪಿಇ ಧರಿಸುವುದು) ಕಡ್ಡಾಯವಾಗಿದೆ. ಹೈ ರಿಸ್ಕ್ ಕಾಂಟ್ಯಾಕ್ಟ್ ನವರು 3 ದಿನಗಳ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಬೇಕು. ಹಾಗು ಲಕ್ಷಣ ರಹಿತರಾಗಿದ್ದಲ್ಲಿ ಯಾವುದೇ ಪರೀಕ್ಷೆಗೆ ಒಳಪಡಿಸದೆ ಬಿಡುಗಡೆ ಮಾಡಬಹುದು.
ಓದಿ:ಕೊರೊನಾ ಕುರಿತು ಜಾಗೃತಿಯಿಂದ ಇರಬೇಕು : ಸಚಿವ ಕೆ. ಎಸ್ ಈಶ್ವರಪ್ಪ