ಕರ್ನಾಟಕ

karnataka

ETV Bharat / state

ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೊನಾ ಬುಲೆಟಿನ್ ಬಿಡುಗಡೆ: ಸೋಂಕಿತರ ಸಂಖ್ಯೆ 41ಕ್ಕೇರಿಕೆ!

ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಬಿಡುಗಡೆ ಮಾಡಿದ್ದು, 43 ವರದಿ ನೆಗಟಿವ್ ಬಂದಿದೆ. ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ. ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು‌ 1,27,941 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು‌, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

Health Department Release of Corona Bulletin
ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೊನಾ ಬುಲೆಟಿನ್ ಬಿಡುಗಡೆ: 43 ಜನರ ವರದಿ ನೆಗೆಟಿವ್

By

Published : Mar 24, 2020, 9:36 PM IST

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಬುಲೆಟಿನ್ ಬಿಡುಗಡೆ ಬಿಡುಗಡೆ ಮಾಡಿದ್ದು, ಇಂದು 8 ಜನರ ವರದಿ ಪಾಸಿಟಿವ್ ಬಂದಿದ್ದರೆ, 43 ವರದಿ ನೆಗಟಿವ್ ಬಂದಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ.

ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೊನಾ ಬುಲೆಟಿನ್ ಬಿಡುಗಡೆ: 43 ಜನರ ವರದಿ ನೆಗೆಟಿವ್


ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಇಂದು ಹೊಸದಾಗಿ‌ 377 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಿದ್ದು, ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 12,406 ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್​ನಲ್ಲಿ ಇಂದು‌ 45 ಜನರನ್ನು ಇರಿಸಿದ್ದು, ಇಲ್ಲಿಯವರೆಗೆ 197 ಜನರನ್ನು ಐಸೋಲೇಷನ್​ನಲ್ಲಿ ಇರಿಸಿದಂತಾಗಿದೆ. ಇಂದು 160 ಜನರ ಮಾದರಿ ಸಂಗ್ರಹ ಮಾಡಿದ್ದು‌, ಈವರೆಗೆ 1,637 ಮಾದರಿ ಸಂಗ್ರಹ ಮಾಡಿದಂತಾಗಿದೆ. ಇಂದು 43 ವರದಿಗಳು ನೆಗಟಿವ್ ಬಂದಿದ್ದು ಈವರೆಗೆ 1196 ವರದಿ ನೆಗಟಿವ್ ಬಂದಿದೆ.

ಯಾವ ಆಸ್ಪತ್ರೆಯಲ್ಲಿ ಎಷ್ಟು ಸೋಂಕಿತರು:ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 5, ಬೆಂಗಳೂರಿನ ಇತರ ಆಸ್ಪತ್ರೆಯಲ್ಲಿ 41, ದಕ್ಷಿಣ ಕನ್ನಡದಲ್ಲಿ 39, ಬಳ್ಳಾರಿ 3,ಕಲಬುರಗಿ 13, ಕೊಡಗು 7, ಚಿಕ್ಕಮಗಳೂರು 1, ಕಲಬುರಗಿ 10, ಕೊಡಗು 5, ಉಡುಪಿಯಲ್ಲಿ 40 , ಬೀದರ್ 2, ಗದಗ 14, ಉತ್ತರ ಕನ್ನಡ 9, ಧಾರವಾಡ 4, ಹಾಸನ 3, ಚಾಮರಾಜನಗರ 2, ಚಿತ್ರದುರ್ಗ 2, ದಾವಣಗೆರೆ 2, ಕೋಲಾರ , 2 ಮೈಸೂರು 4, ರಾಯಚೂರು 1, ಶಿವಮೊಗ್ಗ 4, ಮಂಡ್ಯ 1, ತುಮಕೂರು 3, ಬಾಗಲಕೋಟೆ 0, ಚಿಕ್ಕಮಗಳೂರು 3 ಸೇರಿ ಒಟ್ಟು 197 ಜನರನ್ನ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದು, ಇಂದು 19 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು‌ 1,27,941 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು‌ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ABOUT THE AUTHOR

...view details