ಬೆಂಗಳೂರು:ಕೊರೊನಾ ವೈರಸ್ನಿಂದ ದೇಶದ ಮೊದಲ ಸಾವು ಕರ್ನಾಟಕದಲ್ಲಿ ಉಂಟಾದ ಹಿನ್ನೆಲೆ ಧಿಡೀರ್ ಅಂತ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಕೊರೊನಾ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ - ಕೊರೊನಾ ವೈರಸ್ ಬಗ್ಗೆ ಆರೋಗ್ಯ ಇಲಾಖೆ ಸೂಚನೆ
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇನ್ಮುಂದೆ ಕಡ್ಡಾಯವಾಗಿ 14 ದಿನ ಅವರವರ ಮನೆಗಳಲ್ಲಿ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಕೊರೊನಾ ಭೀತಿ
ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇನ್ಮುಂದೆ ಕಡ್ಡಾಯವಾಗಿ 14 ದಿನ ಅವರವರ ಮನೆಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಕೊರೊನಾ ಪ್ರಕರಣಗಳಿರುವ ವಿದೇಶಗಳಿಂದ ಬರುವವರೆಲ್ಲರ ಮೇಲೆ ಆರೋಗ್ಯ ಇಲಾಖೆ ಈಗ ಹದ್ದಿನ ಕಣ್ಣಿಡಲು ಮುಂದಾಗಿದೆ.
ಮೊದಲಿನಿಂದಲೇ ಇದೇ ನಿಯಮಗಳನ್ನು ಅನುಸರಿಸಬೇಕಾಗಿದ್ದ ಇಲಾಖೆ, ಈಗ ಒಬ್ಬ ವ್ಯಕ್ತಿಯ ಸಾವಿನ ನಂತರ ಎಚ್ಚೆತ್ತುಕೊಂಡು ಆದೇಶ ಹೊರಡಿಸಿದೆ.
Last Updated : Mar 13, 2020, 3:02 PM IST