ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗಳಿಗೆ ಬಾರದಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಕೊರೊನಾ ಭೀತಿ: ಸಣ್ಣಪುಟ್ಟ ಖಾಯಿಲೆಗೆ ರೋಗಿಗಳು ಆಸ್ಪತ್ರೆಗೆ ಬಾರದಂತೆ ಸೂಚನೆ - Coronavirus: Patients are advised not to hospital for minor ailment
ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಇಲಾಖೆ ತೀವ್ರ ಮನ್ನೆಚ್ಚರಿಕಾ ಕ್ರಮ ವಹಿಸಿದ್ದು, ಸಣ್ಣಪುಟ್ಟ ಕಾಯಿಲೆ ಇರುವವರು ಆಸ್ಪತ್ರೆಗಳಿಗೆ ಬಾರದಂತೆ ಆದೇಶ ಹೊರಡಿಸಿದೆ.
![ಕೊರೊನಾ ಭೀತಿ: ಸಣ್ಣಪುಟ್ಟ ಖಾಯಿಲೆಗೆ ರೋಗಿಗಳು ಆಸ್ಪತ್ರೆಗೆ ಬಾರದಂತೆ ಸೂಚನೆ Health Department instructs patients not to be hospitalized for minor illness](https://etvbharatimages.akamaized.net/etvbharat/prod-images/768-512-6458739-thumbnail-3x2-hrs.jpg)
ಸಣ್ಣಪುಟ್ಟ ಖಾಯಿಲೆಗೆ ರೋಗಿಗಳು ಆಸ್ಪತ್ರೆಗೆ ಬಾರದಂತೆ ಸೂಚನೆ
ವೈದ್ಯಕೀಯ ಕಾಲೇಜು ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ತುರ್ತು ಅಗತ್ಯ ಇದ್ದವರು ಮಾತ್ರ ಬರಬೇಕು. ಎರಡು ವಾರ ಅಥವಾ ಮುಂದಿನ ಆದೇಶದವರೆಗೆ ರೋಗಿಗಳು ಈ ಕ್ರಮವನ್ನು ಪಾಲಿಸುವಂತೆ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.