ಕರ್ನಾಟಕ

karnataka

ETV Bharat / state

FREE ಇದ್ರೂ... ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್​ ವಿತರಣೆ ಕುಸಿತ - ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ

2021 ನೇ ಸಾಲಿನಲ್ಲಿ ಕೋವಿಡ್ ಎರಡನೇ ಅಲೆಯ ಕಾರಣದಿಂದ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್‌ಗಳ ವಿತರಣಾ ಕಾರ್ಯ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಕೂಡಲೇ ಕಾರ್ಡ್​ಗಳ ವಿತರಣೆ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದೆ.‌

ಆರೋಗ್ಯ ಇಲಾಖೆ‌
Health Department

By

Published : Jul 23, 2021, 12:21 AM IST

ಬೆಂಗಳೂರು:ಸಾರ್ವಜನಿಕರಿಗೆ ಶುಲ್ಕ ರಹಿತ ಸಾರ್ವತ್ರಿಕ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲು ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುತ್ತಿದೆ. 2019, 2020ರಲ್ಲಿ ಇದ್ದ ಕಾರ್ಡ್ ವಿತರಣೆ ಪ್ರಕ್ರಿಯು ಈ ವರ್ಷ ಕಡಿಮೆ ಆಗಿದ್ದು, ಹೀಗಾಗಿ ಈ ಕುರಿತು ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ, ಕೂಡಲೇ ಕಾರ್ಡ್​ ವಿತರಣೆ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದೆ.‌

ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳಿಂದ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸಾ ವಿಧಾನಗಳನ್ನು ಇದು ಒಳಗೊಂಡಿದೆ. ಈ ಎಲ್ಲಾ ಸೇವೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಯಕ್ರಮದಲ್ಲಿ ಲಭ್ಯವಾಗಬೇಕಾದರೆ ಎಲ್ಲಾ ಕುಟುಂಬ ಮತ್ತು ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯ ಕಾರ್ಡ್ ಹೊಂದುವುದು ಅವಶ್ಯಕವಾಗಿದೆ.

ಕಾರ್ಡ್ ವಿತರಣೆ ಮಾಹಿತಿ:

2019 ವರ್ಷ

  • ಜುಲೈ- 12.00 ಲಕ್ಷ
  • ಆಗಸ್ಟ್-8.00 ಲಕ್ಷ
  • ಅಕ್ಟೋಬರ್-9.7 ಲಕ್ಷ

2020 ವರ್ಷ

  • ಫೆಬ್ರವರಿಯಲ್ಲಿ 11.4 ಲಕ್ಷ
  • ಮಾರ್ಚ್ - 7.00 ಲಕ್ಷ
  • ಆಗಸ್ಟ್ - 6.40 ಲಕ್ಷ

2021ರಲ್ಲಿ ಜನವರಿಯಲ್ಲಿ 67,000 ದಿಂದ ಪ್ರಾರಂಭಿಸಿ ಮೇ- 2021 ರಲ್ಲಿ ಕೇವಲ 530 ಕಾರ್ಡ್​ಗಳನ್ನು ರಾಜ್ಯಾದ್ಯಂತ ವಿತರಿಸಲಾಗಿದೆ. ಇಷ್ಟು ಕಡಿಮೆ ಸಂಖ್ಯೆ ವಿತರಣೆ ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 2020ನೇ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲೂ ಕಾರ್ಡ್‌ಗಳ ವಿತರಣೆಯ ವೇಗ ಈ ಮಟ್ಟಕ್ಕೆ ಕುಸಿದಿರಲಿಲ್ಲ.

2021 ನೇ ಸಾಲಿನಲ್ಲಿ ಕೋವಿಡ್ ಎರಡನೇ ಅಲೆಯ ಕಾರಣದಿಂದ ಕಾರ್ಡ್‌ಗಳ ವಿತರಣಾ ಪ್ರಗತಿ ದಿನೇ ದಿನೇ ಕುಸಿದಿರುವುದು ಮೇಲ್ಕಂಡ ಅಂಕಿ ಅಂಶಗಳಿಂದ ಧೃಡಪಟ್ಟಿದೆ.‌ ಹೀಗಾಗಿ ಈ ಕೂಡಲೇ ಎಲ್ಲಾ ಆರೋಗ್ಯ ಸಂಸ್ಥೆಗಳಿಂದ, ನಾಗರಿಕ ಸೇವಾ ಕೇಂದ್ರಗಳಿಂದ, ಐಟಿಐ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಸೌಲಭ್ಯಗಳನ್ನು ಬಳಸಿಕೊಂಡು ಜಿಲ್ಲೆಗಳಲ್ಲಿ ವಿತರಣಾ ವೇಗವನ್ನು ಹೆಚ್ಚಿಸುವಂತೆ ಜಿಲ್ಲಾ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಓದಿ: ಸಿಎಂ ಯಡಿಯೂರಪ್ಪ ಬದಲಾವಣೆ ಸ್ಪಷ್ಟ; ಯಾರಾಗ್ತಾರೆ ಮುಂದಿನ ಸಿಎಂ ಅನ್ನೋದು ಅಸ್ಪಷ್ಟ!

ABOUT THE AUTHOR

...view details