ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ವ್ಯಕ್ತಿಯ ಫುಲ್​ ಡಿಟೇಲ್ಸ್​ ನೀಡಿದ ಆರೋಗ್ಯ ಇಲಾಖೆ - Corona Positive Person

ಕೊರೊನಾ ಸೋಂಕಿತ ವ್ಯಕ್ತಿ ವಿದೇಶದಿಂದ ಹೊರಟ ಕ್ಷಣದಿಂದ ಆಸ್ಪತ್ರೆಗೆ ದಾಖಲಾಗುವವರೆಗೆ ಎಲ್ಲೆಲ್ಲಿ ಭೇಟಿಯಾಗಿದ್ದರು ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ.

corona
ಕೊರೊನಾ

By

Published : Mar 18, 2020, 2:23 AM IST

ಬೆಂಗಳೂರು:ಅಮೆರಿಕಾದಿಂದ ಲಂಡನ್ ಮೂಲಕ ಬೆಂಗಳೂರಿಗೆ ಆಗಮಿಸಿದ್ದ 32 ವರ್ಷದ ಟೆಕ್ಕಿ(ಪಿ-8)ಗೆ ಕೊರೊನಾ ಪಾಸಿಟಿವ್ ಇರುವುದನ್ನು ಈಗಾಗಲೇ ದೃಢಪಡಿಸಿದ್ದ ಆರೋಗ್ಯ ಇಲಾಖೆ ಇದೀಗ ಸೋಂಕಿತ ವ್ಯಕ್ತಿ ವಿದೇಶದಿಂದ ಹೊರಟ ಕ್ಷಣದಿಂದ ಆಸ್ಪತ್ರೆಗೆ ದಾಖಲಾಗುವವರೆಗೆ ಎಲ್ಲೆಲ್ಲಿ ಭೇಟಿಯಾಗಿದ್ದರು ಎನ್ನುವ ಮಾಹಿತಿಯನ್ನು ಪ್ರಕಟಿಸಿದೆ.

ಆರೋಗ್ಯ ಇಲಾಖೆಯಿಂದ ಮಾಹಿತಿ

  • ಮಾರ್ಚ್ 6 ನಸುಕಿನ ಹೊತ್ತು 4.30 ಕ್ಕೆ ಅಮೆರಿಕಾದ ಸ್ಯಾನ್ ಆ್ಯಂಟೋನಿಯಂ ನಿಂದ ಹೊರಟು ಡಾಲ್ಲಾಸ್​ಗೆ ಅಮೆರಿಕನ್ ಏರ್ ವೇಸ್ ಮೂಲಕ ಪ್ರಯಾಣ.
  • ಮಾರ್ಚ್ 7 ರಂದು ಡಲ್ಲಾಸ್ ನಿಂದ ಲಂಡನ್​​ನ ಹೀರ್ಥೋಗೆ ಬೆಳಗ್ಗೆ 9.20 ಕ್ಕೆ ಅಮೆರಿಕನ್ ಏರ್ ವೇಸ್ ಮೂಲಕ ಪ್ರಯಾಣ.
  • ಮಾರ್ಚ್ 8 ರಂದು ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಿಂದ ಬ್ರಿಟಿಷ್ ಏರ್ ವೇಸ್ ಮೂಲಕ ಹೊರಟು 4.29 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ.
  • ಮಾರ್ಚ್ 9 ರಂದು ಗೇಮರ್‌ ಟೆನ್ನಿಸ್ ಕೋರ್ಟ್​ಗೆ ಭೇಟಿ ನೀಡಿ ಸರದಿಯಂತೆ ಮೂವರು ಆಟಗಾರರೊಂದಿಗೆ ಆಟ.
  • ಮಾರ್ಚ್ 10 ರಂದು ಸ್ವಂತ ವಾಹನದಲ್ಲಿ ತೆರಳಿ ಇಬ್ಬರು ಸ್ನೇಹಿತರ ಭೇಟಿ ನಂತರ ಪತ್ನಿಯೊಂದಿಗೆ ಮಾಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ.
  • ಮಾರ್ಚ್ 11 ಕೊರೊನಾ ನಿಗಾದ ಎಸ್‌ಎಸ್‌ಯು ತಂಡಕ್ಕೆ ಸಿಕ್ಕ ಟೆಕ್ಕಿ, ಸಣ್ಣ ಪ್ರಮಾಣದ ಶೀತ ಪತ್ತೆ, ನಿವಾಸದಲ್ಲಿ ಪ್ರತ್ಯೇಕವಾಗಿರಲು ಸಲಹೆ.
  • ಮಾರ್ಚ್ 12 ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳಲು ಎಸ್‌ಎಸ್‌ಯು ತಂಡದ ಸಲಹೆ.
  • ಮಾರ್ಚ್ 13 ಆಸ್ಪತ್ರೆಗೆ ತೆರಳದೇ ಮನೆಯಲ್ಲೇ ಉಳಿದ ಟೆಕ್ಕಿ(ಪಿ-8).
  • ಮಾರ್ಚ್ 14 ರಂದು ಸ್ವಂತ ವಾಹನದಲ್ಲಿ ಪತ್ನಿ ಜೊತೆ ರಾಜೀವ್ ಗಾಂಧಿ ಆಸ್ಪತ್ರೆಗೆ ಭೇಟಿ.
  • ಮಾರ್ಚ್ 15 ರಂದು ಬೆಳಗ್ಗೆ 9.30 ಕ್ಕೆ ನಗರದಲ್ಲಿ ಕೊರೊನಾ ರೋಗಿಗಳಿಗೆ‌ ಚಿಕಿತ್ಸೆ ನೀಡಲು ಗುರುತಿಸಲ್ಪಟ್ಟ ಆಸ್ಪತ್ರೆಗೆ 108 ಆಂಬುಲೆನ್ಸ್ ಮೂಲಕ ಸ್ಥಳಾಂತರ ಮಾಡಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ವಿಮಾನಗಳ ಪ್ರಯಾಣಿಕರ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆಗೆ ಒಳಪಡಲಿದ್ದು, ಬೆಂಗಳೂರಿಗೆ ಬಂದ ನಂತರ ಟೆನ್ನಿಸ್ ಆಟ ಆಡಿದ್ದ ಮೂವರು ಮತ್ತು ಇಬ್ಬರು ಸ್ನೇಹಿತರನ್ನು ಪತ್ತೆ ಹಚ್ಚಲಾಗಿದೆ.

ಕೊರೊನಾ ಸೋಂಕಿತ ವ್ಯಕ್ತಿಯ ಮಾಹಿತಿ.

ಆದರೆ ಪತ್ನಿಯ ಜೊತೆ ಮಡಿವಾಳದ ಸಂಧ್ಯಾ ಚಿತ್ರಂಮದಿರಲ್ಲಿ‌ ಸೋಂಕಿತ ವ್ಯಕ್ತಿ ಪಿ-8 ಸಿನಿಮಾ ವೀಕ್ಷಣೆ ಮಾಡಿದ್ದು ಅಂದಿನ ಪ್ರೇಕ್ಷಕರ ಪತ್ತೆ ದೊಡ್ಡ ಸವಾಲಾಗಿದೆ. ಆದರೂ ಸೋಂಕಿತ ವ್ಯಕ್ತಿಯ ನೇರ ಸಂಪರ್ಕ ಹಾಗೂ ಎರಡನೇ ಹಂತದ ಸಂಪರ್ಕಿತ ವ್ಯಕ್ತಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details