ಕರ್ನಾಟಕ

karnataka

ETV Bharat / state

ಗೃಹ ಸಚಿವರೇ.. ನಿಮ್ಮ ಸರ್ಕಾರದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಏನಾದರೂ‌ ಇದೆಯಾ?: ಜೆಡಿಎಸ್ ಪ್ರಶ್ನೆ - ಎನ್ ಸಿ ಆರ್ ಬಿ ವರದಿ

ಜೈಲುಗಳಲ್ಲಿ ಸಾವಿಗೀಡಾದ 58 ಕೈದಿಗಳಲ್ಲಿ 16 ಮಂದಿ ಹೃದಯಾಘಾತ. ಜೈಲುಗಳಲ್ಲಿರುವ ಕೈದಿಗಳಿಗೂ ಸಮರ್ಪಕ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಬಿಜೆಪಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ಗೃಹ ಸಚಿವ ಆರಗ ಜ್ಷಾನೇಂದ್ರಗೆ ಟ್ವೀಟ್ ಮೂಲಕ ಜೆಡಿಎಸ್ ಈ ಪ್ರಶ್ನೆ ಮಾಡಿದೆ.

jds party symbol
ಜೆಡಿಎಸ್ ಪಕ್ಷದ ಚಿಹ್ನೆ

By

Published : Jan 6, 2023, 5:43 PM IST

ಬೆಂಗಳೂರು : 2021ರ ರಾಷ್ಟ್ರೀಯ ಅಪರಾಧ ದಾಖಲೆಗಳ (ಎನ್ ಸಿ ಆರ್ ಬಿ) ಬ್ಯೂರೋ ವರದಿ ಪ್ರಕಾರ ಕರ್ನಾಟಕದ ಜೈಲುಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ 58 ಕೈದಿಗಳು ಸಾವೀಗೀಡಾಗಿದ್ದಾರೆ. ರಾಜ್ಯದ ಗೃಹ ಸಚಿವರು ಅರಗ ಜ್ಷಾನೇಂದ್ರ ಅವರೇ, ನಿಮ್ಮ ಸರ್ಕಾರದ ಆಡಳಿತದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಏನಾದರೂ‌ ಇದೆಯಾ? ಎಂದು ಜೆಡಿಎಸ್ ಪಕ್ಷ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ನಿಮ್ಮದೇ ಬಿಜೆಪಿ ಪಕ್ಷದ ಕಾರ್ಯಕರ್ತರಿಗೂ ಜೀವರಕ್ಷಣೆ ಇಲ್ಲ. ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೂ ಸಮರ್ಪಕ ಆರೋಗ್ಯ ವ್ಯವಸ್ಥೆ ಕಲ್ಪಿಸಲು ನೀವು ವಿಫಲರಾಗಿದ್ದೀರಿ ಎಂದು ಟೀಕಿಸಿದೆ. ಮಾನವ ಹಕ್ಕುಗಳು ನಿಮ್ಮ ಪಾಲಿಗೆ ತಮಾಷೆಯ ಸಂಗತಿ ಇರಬೇಕೇನೋ. ನಿಮಗೆ ಅಧಿಕಾರ ಕೊಟ್ಟ ಕನ್ನಡಿಗರ ದೌರ್ಭಾಗ್ಯ ಪರಿ ಇದು. ನಿಮ್ಮ ಮೇಲೆ ನಂಬಿಕೆ ಇಟ್ಟು ಬಿಜೆಪಿ ಪಕ್ಷಕ್ಕೆ ಅಧಿಕಾರ ಕೋಟ್ರೆ. ಏನೆಲ್ಲಾ ಪರಿಸ್ಥಿತಿ ಅನುಭವಿಸಬೇಕಾಗಿ ಬಂತಲ್ಲ ಕನ್ನಡಿಗರು. ಅಧಿಕಾರ ಕೊಟ್ಟು ರಾಜ್ಯದ ಜನರು ಪಶ್ಚಾತಾಪ ಪಡುವಂತಾಗಿದೆ ಎಂದು ಅದು ಆರೋಪಿಸಿದೆ.

58 ಕೈದಿಗಳಲ್ಲಿ 16 ಮಂದಿಗೆ ಹೃದಯಾಘಾತ: ಜೈಲುಗಳಲ್ಲಿ ಸಾವಿಗೀಡಾದ 58 ಕೈದಿಗಳಲ್ಲಿ 16 ಮಂದಿ ಹೃದಯಾಘಾತದಿಂದಲೇ ನಿಧನರಾಗಿದ್ದಾರೆ. 11 ಜನ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಉಳಿದವರು ಎಚ್ ಐ ವಿ & ಟಿ.ಬಿ., ಯಕೃತ್ತು, ಕಿಡ್ನಿ, ಕ್ಯಾನ್ಸರ್ ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ ಎಂದು ಜೆಡಿಎಸ್ ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಾರ ಬೆಂಗಳೂರಿನ ಕಾರಾಗೃಹಗಳಲ್ಲಿರುವ 8,681 ಕೈದಿಗಳಿಗೆ ಸಮರ್ಪಕ ಆರೋಗ್ಯ ಸೇವೆಯ ಅಗತ್ಯವಿದೆ.

ಆದರೆ, ಕೇವಲ 2,537 ಮಂದಿಗೆ ಮಾತ್ರ ವೈದ್ಯಕೀಯ ನೆರವು ಸಿಕ್ಕಿದೆ. ಜೈಲುಗಳೂ ಅಸಮರ್ಪಕ ಅವ್ಯವಸ್ಥೆಯಿಂದ ಕೊಳೆಯುತ್ತಿರುವ ಸಂಗತಿ 40 ಪರ್ಸೆಂಟ್​ ಕಮಿಷನ್ ಸರ್ಕಾರಕ್ಕೆ ತಿಳಿದಿಲ್ಲವೇ? ಇಷ್ಟೆಲ್ಲಾ ಅವ್ಯವಸ್ಥೆಯಿದ್ದರೂ ಗೃಹಸಚಿವರ ಗಮನಿಸುತ್ತಿಲ್ಲವೇ? ಇದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ ಎಂದು ಎಂದು ಪ್ರಶ್ನೆ ಮಾಡಿದೆ.

ಆರೋಗ್ಯ ಸಿಬ್ಬಂದಿ ಅವಶ್ಯ: ರಾಜ್ಯದ ವಿವಿಧ ಬಂಧೀಖಾನೆಗಳಲ್ಲಿ 80 ಜನರ ಆರೋಗ್ಯ ಸಿಬ್ಬಂದಿ ಅಗತ್ಯವೂ ಇದೆ. ಆದರೆ ಸರ್ಕಾರ ಏನೂ ಗೊತ್ತು ಇಲ್ಲದಂತೆ ವರ್ತಿಸುತ್ತಿದೆ. ಕೈದಿಗಳಿಗೂ ಆರೋಗ್ಯ ಉಪಾಚಾರ ಮಾಡುವ ಸಿಬ್ಬಂದಿ ನೇಮಕವೂ ವಿಳಂಬತೆ ತೋರಿ ರಾಜ್ಯ ಸರ್ಕಾರ ತನ್ನ ಮಾನವೀಯತೆ ಮರೆತಿದೆ. ಅಂಕಿ-ಸಂಖ್ಯೆಯ ಪ್ರಕಾರ ಕೇವಲ 31 ಮಂದಿಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ ಸಿ ಆರ್ ಬಿ ವರದಿ ಬಹಿರಂಗಗೊಳಿಸಿದೆ.

27 ಮಂದಿ ಆರೋಗ್ಯ ವೈದ್ಯಕೀಯ ಅಧಿಕಾರಿಗಳ ಬದಲಿಗೆ 9 ಜನ ಅಧಿಕಾರಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. 499 ಕೈದಿಗಳಿಗೆ ಒಬ್ಬ ಆರೋಗ್ಯ ಸಿಬ್ಬಂದಿ ಕೆಲಸ ಮಾಡುತ್ತಿರುವ ಸಂಗತಿ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕಿದೆ ಎಂದು ಜೆಡಿಎಸ್​ ವಾಗ್ದಾಳಿ ನಡೆಸಿದೆ.

ರಾಜ್ಯದ ಹೆಸರು ಮೂರುಕಾಸಿಗೆ ಹರಾಜು: ಆರಗ ಜ್ಞಾನೇಂದ್ರ ಅವರೆ, ನಿಮ್ಮ ಆಡಳಿತದಲ್ಲಿ ಸಾಮಾನ್ಯ ರೈತನಿಗಾಗಲಿ, ಕೆಲಸ ಸಿಗದೇ ಪರಿತಪಿಸುತ್ತಿರುವ ಯುವಕ - ಯುವತಿಯರಿಗಾಗಲಿ, ಕಮಿಷನ್ ದಂಧೆಯಲ್ಲಿ ಹೈರಾಣಾಗಿ ಜೀವ ಕಳೆದುಕೊಳ್ಳುತ್ತಿರುವ ಗುತ್ತಿಗೆದಾರರಿಗಾಗಲಿ, ಅಧಿಕಾರಿ ವರ್ಗವಾಗಲಿ, ಕಾರ್ಮಿಕರಾಗಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಹರಿಹಾಯ್ದಿದೆ.

ನಿಮ್ಮ ರಾಜ್ಯ ಸರ್ಕಾರ ಹೇಳೋದೊಂದು ಮಾಡೋದು ಮತ್ತೊಂದು, ಭರವಸೆ ನೀಡಿದಂತೆ ಮುನ್ನಡೆಯಲಿಲ್ಲ. ಇಂದಿನ ದಿನಗಳಲ್ಲಿ ಎಲ್ಲ ವಸ್ತುಗಳೂ ಗಗನಕ್ಕೇರಿದ್ದು, ಸಾಮಾನ್ಯ ಜನರು ಬೇಸತ್ತು ಹಿಡಿಶಾಪ ಹಾಕುವಂತಾಗಿದೆ. ಆಡಳಿತ ನಡೆಸಲು ಬಾರದ ನಿಮಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಿ. ನಿಮ್ಮ ದುರಾಡಳಿತದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಹೆಸರು ಮೂರುಕಾಸಿಗೆ ಹರಾಜಾಗಿದೆ. ನಿಮ್ಮಿಂದಾಗಿ‌ ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಟ್ವೀಟ್​ದಲ್ಲಿ ಟೀಕಿಸಿದೆ.

ಇದನ್ನೂಓದಿ:ನಾನು ಬಿಜೆಪಿ ಸೇರುವುದರ ಬಗ್ಗೆ ಯೋಚಿಸಿಲ್ಲ: ಸಂಸದೆ ಸುಮಲತಾ ಅಂಬರೀಶ್​


ABOUT THE AUTHOR

...view details