ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಹೆಡ್ ಕಾನ್ಸ್ಟೇಬಲ್ ಓರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಕಲಹ: ಹೆಡ್ ಕಾನ್ಸ್ಟೇಬಲ್ ನೇಣಿಗೆ ಶರಣು - Bangalore crime news
ಯಲಹಂಕ ನ್ಯೂಟನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಕ್ವಾಟ್ರಸ್ನಲ್ಲಿ ಕುಟುಂಬ ಸಮೇತ ವಾಸವಿದ್ದ ಈ ಹೆಡ್ಕಾನ್ಸ್ಟೇಬಲ್, ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![ಕೌಟುಂಬಿಕ ಕಲಹ: ಹೆಡ್ ಕಾನ್ಸ್ಟೇಬಲ್ ನೇಣಿಗೆ ಶರಣು Head constable committed suicide in bangalore](https://etvbharatimages.akamaized.net/etvbharat/prod-images/768-512-7758514-thumbnail-3x2-nin.jpg)
ಗುರುಪ್ರಸಾದ್ (38) ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ಸ್ಟೇಬಲ್. ಮೂಲತಃ ಇವರು ಚನ್ನಪಟ್ಟಣದವರಾಗಿದ್ದು, ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಯಲಹಂಕ ನ್ಯೂಟನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಕ್ವಾಟ್ರಸ್ನಲ್ಲಿ ಕುಟುಂಬ ಸಮೇತ ವಾಸವಿದ್ದರು. ಒಂದು ವಾರದ ಹಿಂದೆ ಹೆಂಡತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು ಎನ್ನಲಾಗಿದೆ. ಇದಾದ ನಂತರ ಆಕೆ ಮನೆ ಬಿಟ್ಟು ಊರು ಸೇರಿದ್ದರು.
ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ತೀವ್ರ ಮದ್ಯವ್ಯಸನಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ನೋವಿನಲ್ಲಿದ್ದ ಇವರು, ಕ್ವಾಟ್ರಸ್ನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.