ಬೆಂಗಳೂರು:ಅಸಂಖ್ಯಾತ ಜನರ ನಿಸ್ವಾರ್ಥ ತ್ಯಾಗ-ಬಲಿದಾನಗಳ ಫಲವೇ ಬಹುತ್ವದ ಆತ್ಮವುಳ್ಳ ಭಾರತಕ್ಕೆ ದಕ್ಕಿದ ಸ್ವಾತಂತ್ರ್ಯ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.
ವ್ಯಕ್ತಿಗತ ಅಂತರದೊಂದಿಗೆ ಸ್ವಾತಂತ್ರೋತ್ಸವ ಸಂಭ್ರಮಿಸೋಣ: ಹೆಚ್‌ಡಿಕೆ - HDK wishes Happy Independence Day to the people
ದೇಶವೆಂದರೆ ಕೇವಲ ಮಣ್ಣಲ್ಲ. ದೇಶವೆಂದರೆ ಅಲ್ಲಿನ ಜನರು, ಬಹುಸಂಸ್ಕೃತಿಯ ಮೆರವಣಿಗೆ, ಭಾವೈಕ್ಯದ ದೀವಿಗೆ ಎಂದು ಟ್ವೀಟ್ ಮಾಡುವ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರು ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.
![ವ್ಯಕ್ತಿಗತ ಅಂತರದೊಂದಿಗೆ ಸ್ವಾತಂತ್ರೋತ್ಸವ ಸಂಭ್ರಮಿಸೋಣ: ಹೆಚ್‌ಡಿಕೆ ಹೆಚ್‌ಡಿಕೆ](https://etvbharatimages.akamaized.net/etvbharat/prod-images/768-512-8421671-915-8421671-1597414905402.jpg)
ಹೆಚ್‌ಡಿಕೆ
ಈ ಸ್ವಾತಂತ್ರ್ಯವನ್ನು ಜಾಣತನದಿಂದ ಕಾಯ್ದುಕೊಂಡು ಹೋಗುವುದೇ ಸ್ವಾತಂತ್ರ್ಯವೀರರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ ಮತ್ತು ಅರ್ಥಪೂರ್ಣ ಸ್ವಾತಂತ್ರ್ಯ ಸಂಭ್ರಮವಾಗಲಿದೆ.
ಅಲ್ಲದೇ ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಜನರು, ಬಹುಸಂಸ್ಕೃತಿಯ ಮೆರವಣಿಗೆ, ಭಾವೈಕ್ಯದ ದೀವಿಗೆ. ವ್ಯಕ್ತಿಗತ ಅಂತರದೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂಭ್ರಮಿಸೋಣ ಎಂದು ಹೆಚ್‌ಡಿಕೆ ಟ್ವೀಟ್‌ನಲ್ಲಿ ಹೇಳಿದ್ದಾರೆ.