ಬೆಂಗಳೂರು:ಹೈದರಾಬಾದ್ನಲ್ಲಿ ನಡೆದ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ ) ಪಕ್ಷದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರಿಗೆ ಶುಭ ಹಾರೈಸಿದರು. ಈ ಕುರಿತು ಟ್ವೀಟ್ ನಲ್ಲಿ ಹೆಚ್ ಡಿಕೆ, ತೆಲಂಗಾಣದ ಟಿಆರ್ಎಸ್ ಪಕ್ಷವು 'ಬಿಆರ್ಎಸ್' ಹೆಸರಿನಲ್ಲಿ ರಾಷ್ಟ್ರೀಯ ಪಕ್ಷವಾದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಹೇಳಿದರು.
ಬಿಆರ್ಎಸ್ ಪಕ್ಷಕ್ಕೆ ಶುಭ ಹಾರೈಸಿದ ಹೆಚ್ ಡಿ ಕುಮಾರಸ್ವಾಮಿ - ಬಿಆರ್ಎಸ್ ಪಕ್ಷ
ಬಿಆರ್ಎಸ್ ಪಕ್ಷದ ಸಂಸ್ಥಾಪನಾ ಕಾರ್ಯಕ್ರಮಕ್ಕೆ ಭಾಗಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರಿಗೆ ಶುಭ ಹಾರೈಸಿದರು.
ಬಿಆರ್ಎಸ್ ಪಕ್ಷಕ್ಕೆ ಶುಭ ಹಾರೈಸಿದ ಹೆಚ್.ಡಿ.ಕೆ
ಭಾರತದ ರಾಜಕಾರಣದಲ್ಲಿ ಬಿಆರ್ಎಸ್ ಆರಂಭ ಮಹೋನ್ನತ ಮೈಲಿಗಲ್ಲು. ಶೋಷಿತರ, ದಮನಿತರ, ಕೃಷಿ ಕಾರ್ಮಿಕರ ದನಿಯಾಗಿ ಈ ಪಕ್ಷ ಕೆಲಸ ಮಾಡಲಿದೆ. ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪರಿಪೂರ್ಣ ಸಹಕಾರ ನೀಡುವುದಾಗಿ ಘೋಷಣೆ ಮಾಡಿದ ಕೆಸಿಆರ್ ಅವರಿಗೆ ನಾನು ಆಭಾರಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕರ್ನಾಟಕದಲ್ಲಿ ಬಿಆರ್ಎಸ್ ಸ್ಪರ್ಧೆ, ಕುಮಾರಸ್ವಾಮಿ ಸಿಎಂ ಆಗಬೇಕು: ಕೆಸಿಆರ್