ಬೆಂಗಳೂರು : ಕೊರೊನಾ ಸೋಂಕು ದಿನೆ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳಲ್ಲಿನ ಪರಿಸ್ಥಿತಿಯ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆದರು.
ರಾಜ್ಯದಲ್ಲಿ ಕೊರೊನಾ ಅಬ್ಬರ : ಪಕ್ಷದ ಶಾಸಕರ ಜೊತೆ ಹೆಚ್ಡಿಕೆ ವಿಡಿಯೋ ಸಂವಾದ - kumaraswamy news
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಪಿ ನಗರದ ತಮ್ಮ ನಿವಾಸದಿಂದ ವಿಡಿಯೋ ಸಂವಾದ ನಡೆಸಿ, ದೇವನಹಳ್ಳಿ, ಮಾಗಡಿ, ದಾಸರಹಳ್ಳಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳ ಜೆಡಿಎಸ್ ಶಾಸಕರ ಬಳಿ ಮಾಹಿತಿ ಪಡೆದುಕೊಂಡರು.
![ರಾಜ್ಯದಲ್ಲಿ ಕೊರೊನಾ ಅಬ್ಬರ : ಪಕ್ಷದ ಶಾಸಕರ ಜೊತೆ ಹೆಚ್ಡಿಕೆ ವಿಡಿಯೋ ಸಂವಾದ hdk-video-conference](https://etvbharatimages.akamaized.net/etvbharat/prod-images/768-512-7357240-591-7357240-1590502603224.jpg)
ಜೆಪಿ ನಗರದ ತಮ್ಮ ನಿವಾಸದಿಂದ ವಿಡಿಯೋ ಸಂವಾದ ನಡೆಸಿದ ಅವರು, ದೇವನಹಳ್ಳಿ, ಮಾಗಡಿ, ದಾಸರಹಳ್ಳಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳ ಜೆಡಿಎಸ್ ಶಾಸಕರ ಬಳಿ ಮಾಹಿತಿ ಪಡೆದುಕೊಂಡರು. ಕೊರೊನಾ ಸೋಂಕು ಹಲವು ಜಿಲ್ಲೆಗಳಲ್ಲಿ ಉಲ್ಬಣವಾಗುತ್ತಿರುವ ಹಿನ್ನೆಲೆ ಸರ್ಕಾರದಿಂದ ತಮ್ಮ ಪಕ್ಷದ ಶಾಸಕರ ಕ್ಷೇತ್ರಕ್ಕೆ ಸಿಕ್ಕ ಅನುಕೂಲಗಳೇನು ? ಆಗಬೇಕಾದ ಕಾರ್ಯಕ್ರಮಗಳು ಹಾಗೂ ಸರ್ಕಾರ ಯಾವ ರೀತಿ ಸಹಕಾರ ಕೊಡುತ್ತಿದೆ? ತಮ್ಮ ಕ್ಷೇತ್ರಗಳಲ್ಲಿ ಕೊರೊನಾ ಪರಿಸ್ಥಿತಿ ಯಾವ ರೀತಿ ಇದೆ? ಅದನ್ನು ಹೇಗೆ ನಿಭಾಯಿಸುತ್ತಿದ್ದೀರಿ ಎಂಬ ವಿಚಾರಗಳ ಬಗ್ಗೆ ಶಾಸಕರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಯಾದಗಿರಿಯ ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಕುಂದಕೂರು, ನಾಗಮಂಗಲ ಶಾಸಕ ಸುರೇಶ್ ಗೌಡ, ದೇವನಹಳ್ಳಿ ಶಾಸಕ ನಾರಾಯಣಸ್ವಾಮಿ ಸೇರಿದಂತೆ ಎಲ್ಲ ಶಾಸಕರು, ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ, ಕೊರೊನಾ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.