ಬೆಂಗಳೂರು: ಶಿರಾ ನಮ್ಮದೇ ಕ್ಷೇತ್ರ, ರಾಜರಾಜೇಶ್ವರಿ ನಗರವೂ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಅಚಲವಾಗಿದೆ. ಸೂಕ್ತ, ನ್ಯಾಯ ಸಮ್ಮತ ಅಭ್ಯರ್ಥಿಗಳನ್ನು ಶೀಘ್ರವೇ ಪಕ್ಷ ಘೋಷಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಶಿರಾ, ಆರ್.ಆರ್ ನಗರಕ್ಕೆ ಶೀಘ್ರ ಅಭ್ಯರ್ಥಿಗಳ ಘೋಷಣೆ: ಹೆಚ್ಡಿಕೆ - ಶಿರಾ ಉಪಚುನಾವಣೆ ಬಗ್ಗೆ ಹೆಚ್ಡಿಕೆ ಹೇಳಿಕೆ
ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಗೆ ಜೆಡಿಎಸ್ನಿಂದ ಶೀಘ್ರದಲ್ಲೇ ಸೂಕ್ತ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
![ಶಿರಾ, ಆರ್.ಆರ್ ನಗರಕ್ಕೆ ಶೀಘ್ರ ಅಭ್ಯರ್ಥಿಗಳ ಘೋಷಣೆ: ಹೆಚ್ಡಿಕೆ HDK Tweet o n Shira, RR Nagar By Poll](https://etvbharatimages.akamaized.net/etvbharat/prod-images/768-512-8995404-thumbnail-3x2-hrs.jpg)
ಈ ಕುರಿತು ಟ್ವೀಟ್ ಮಾಡಿರುವ ಅವರು, ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇಲ್ಲಿ ಗೆದ್ದಿದ್ದರು. ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್ಗೆ ಉಳಿಸಿಕೊಟ್ಟಿದ್ದರು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾ ನಾವೇ ಗೆಲ್ಲಬೇಕಾದ ಕ್ಷೇತ್ರ ಎಂದು ಹೇಳಿದ್ದಾರೆ.
ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ. ನಾವು ಅನಿವಾರ್ಯವಾಗಿ ಎದುರಿಸಬೇಕಾದ ನೋವಿನ ಚುನಾವಣೆ ಇದು. ಇತರರು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಅವರಿಗೆ ಇದು ಲಾಭ-ನಷ್ಟದ ವಿಚಾರ. ಆದರೆ, ನಾವು ಇಲ್ಲಿ ನಮ್ಮ ನೋವಿಗೆ ಗೆಲುವಿನ ಮೂಲಕ ಪರಿಹಾರ ಹುಡುಕ ಬಯಸುತ್ತೇವೆ ಎಂದಿದ್ದಾರೆ.