ಆಶಾ ಮತ್ತು ತಂಡದ ಅನಾಥ ಶವಗಳ ಅಂತ್ಯಸಂಸ್ಕಾರ ಇತರರಿಗೆ ಮಾದರಿ: ಹೆಚ್‌ಡಿಕೆ ಟ್ವೀಟ್ - Bangalore latest news
ಚನ್ನಪಟ್ಟಣದ ಆಶಾ ಮತ್ತವರ ತಂಡದ ಸದಸ್ಯರು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ಮಾಡುತ್ತ ಇತರರಿಗೆ ಮಾದರಿ ಆಗಿದ್ದಾರೆ. ಅವರ ಕಾರ್ಯ ಜನ ಮೆಚ್ಚುವಂಥದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
![ಆಶಾ ಮತ್ತು ತಂಡದ ಅನಾಥ ಶವಗಳ ಅಂತ್ಯಸಂಸ್ಕಾರ ಇತರರಿಗೆ ಮಾದರಿ: ಹೆಚ್‌ಡಿಕೆ ಟ್ವೀಟ್ H.D kumaraswamy](https://etvbharatimages.akamaized.net/etvbharat/prod-images/768-512-05:00:06:1594294206-kn-bng-05-hdk-tweet-script-7208083-09072020165512-0907f-1594293912-577.jpg)
H.D kumaraswamy
ಬೆಂಗಳೂರು:ಕೊರೊನಾ ಭೀತಿಯ ಇತ್ತೀಚೆಗಿನ ದಿನಗಳಲ್ಲಿ ಶವಸಂಸ್ಕಾರ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ, ಒಂದಿಷ್ಟು ಮಂದಿ ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.