ಕರ್ನಾಟಕ

karnataka

ETV Bharat / state

ಮಂಗಳೂರು ಗಲಾಟೆ ಪ್ರಕರಣ: ಕಾನೂನು ಇಲಾಖೆ ವಿಫಲವಾಗಿದೆ ಎಂದ ಹೆಚ್​ಡಿಕೆ - bangalore latest news

ಮಂಗಳೂರು ಗಲಾಟೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸದೆ ಕಾನೂನು ಇಲಾಖೆ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

HDK says that law department was failed!
ಮಂಗಳೂರು ಗಲಾಟೆ : ಕಾನೂನು ಇಲಾಖೆ ವಿಫಲವೆಂದ ಹೆಚ್​ಡಿಕೆ!

By

Published : Feb 19, 2020, 9:19 PM IST

ಬೆಂಗಳೂರು: ಮಂಗಳೂರು ಗಲಾಟೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸದೆ ಕಾನೂನು ಇಲಾಖೆ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ವಿಧಾನಸಭೆಯಲ್ಲಿಂದು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಹೆಚ್​ಡಿಕೆ, ಆಶೀಫ್ ಮತ್ತು ಇತರೆ 20 ಮಂದಿಗಳ ವಿರುದ್ಧ ಪೊಲೀಸರು ಕ್ರಿಮಿನಲ್​ ಕೇಸು ದಾಖಲಿಸಿದ್ದರು. ಇದರ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯುವಾಗ ಸರ್ಕಾರದ ಪರವಾಗಿ ಸರಿಯಾದ ವಾದ ಮಂಡಿಸಿಲ್ಲ. ಅಂತಹ ವಕೀಲರನ್ನು ಏಕೆ ಇಟ್ಟುಕೊಂಡಿದ್ದೀರಾ, ಕಾನೂನು ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮಂಗಳೂರು ಗಲಾಟೆ: ಕಾನೂನು ಇಲಾಖೆ ವಿಫಲವೆಂದ ಹೆಚ್​ಡಿಕೆ!

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ನ್ಯಾಯಾಲಯ ಜಮೀನು ಅರ್ಜಿ ವಿಚಾರಣೆಯನ್ನಷ್ಟೇ ನಡೆಸಿದೆ. ಅಂತಿಮ ತೀರ್ಪು ಬಂದಿಲ್ಲ. ಜಾಮೀನು ಅರ್ಜಿ ವಿಚಾರಣೆ ವೇಳೆ ವ್ಯಕ್ತಪಡಿಸಲಾದ ಅಭಿಪ್ರಾಯಗಳನ್ನು ತೀರ್ಪು ಎಂದು ಪರಿಗಣಿಸಲಾಗುವುದಿಲ್ಲ. ಇನ್ನೂ ತನಿಖೆ ಬಾಕಿ ಇದೆ. ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ. ಆ ಸಂದರ್ಭದಲ್ಲಿ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲಾ ಸಾಕ್ಷ್ಯಗಳನ್ನು ಹಾಜರುಪಡಿಸುತ್ತೇವೆ ಎಂದು ಸಮರ್ಥಿಸಿಕೊಂಡರು.

ಇದನ್ನೇ ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡ ಹೆಚ್​ಡಿಕೆ, ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಕೊಡಬಾರದು ಎಂದು ಸರ್ಕಾರಿ ವಕೀಲರು ಗಂಭೀರ ಸ್ವರೂಪದ ವಾದ ಮಾಡುತ್ತಾರೆ. ಮಂಗಳೂರು ಗಲಭೆಯಲ್ಲಿ ನಿಜವಾಗಿಯೂ ತಪ್ಪಿಸ್ಥರ ಮೇಲೆ ಪ್ರಕರಣ ದಾಖಲಿಸಿದ್ದರೆ ಸರ್ಕಾರಿ ವಕೀಲರು ವಾದ ಮಾಡುವಲ್ಲಿ ಏಕೆ ವಿಫಲರಾದರು? ಸಾಕ್ಷ್ಯಗಳನ್ನು ಏಕೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದರು. ಸಾಕ್ಷ್ಯವನ್ನು ಹಾಜರುಪಡಿಸದೇ ಇರುವ ಲೋಪವನ್ನು ಮಾಧುಸ್ವಾಮಿ ಸದನದಲ್ಲಿ ಒಪ್ಪಿಕೊಂಡರು. ಘಟನೆ ನಡೆದ ಬಳಿಕ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇನೆ. ನನಗೆ ಸಂಪೂರ್ಣ ಮಾಹಿತಿ ಇದೆ. ಎಲ್ಲವನ್ನೂ ವಿವರಿಸುತ್ತೇನೆ ಅವಕಾಶ ಕೊಡಿ ಎಂದು ಕುಮಾರಸ್ವಾಮಿ, ಸ್ಪೀಕರ್ ಅವರಿಗೆ ಮನವಿ ಮಾಡಿದರು.

ABOUT THE AUTHOR

...view details