ಬೆಂಗಳೂರು : ನಮ್ಮ ಕುಟುಂಬದಲ್ಲಿ ಟಿಕೆಟ್ಗಾಗಿ ಸೊಸೆ ಹೊಡೆದಾಟ ಏನೂ ಇಲ್ಲ, ಇವೆಲ್ಲಾ ಷಡ್ಯಂತ್ರ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಪಡಿಸಿದ್ದಾರೆ. ಜೆ ಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಪತ್ನಿ ಪಕ್ಷ ಉಳಿಸಿಕೊಳ್ಳಲು ಚುನಾವಣೆ ನಿಂತರು ಅನ್ನೋದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಈಗ ಇದನ್ನು ಹಾಸನ ಅಭ್ಯರ್ಥಿ ಆಯ್ಕೆಗೂ ಹೊಂದಿಸಿ ಚರ್ಚೆ ಮಾಡುವುದು ಬೇಡ ಎಂದರು.
ಹಾಸನದಲ್ಲಿ ಭವಾನಿ ರೇವಣ್ಣ ಟಿಕೆಟ್ ಬೇಡಿಕೆ ವಿಚಾರ: ಅನಿತಾ ಕುಮಾರಸ್ವಾಮಿಗೂ ಟಿಕೆಟ್ ನೀಡಬೇಕು ಎಂಬ ಚರ್ಚೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರನ್ನು ಈ ವಿಚಾರದ ನಡುವೆ ಎಳೆದು ತರಬೇಡಿ. ಅನಿತಾ ಅವರಿಗೆ ರಾಜಕೀಯ ಮಾಡಿ ಸಾಧಿಸುವುದು ಏನೂ ಇಲ್ಲ. ಅವರನ್ನು ಹಿಂದೆ ಶಾಸಕ ಸ್ಥಾನಕ್ಕೆ ನಿಲ್ಲಿಸಿದ್ದು ಪಕ್ಷ ಉಳಿಸಿಕೊಳ್ಳೋಕೆ. ನಮ್ಮ ಅಭ್ಯರ್ಥಿಗಳು ಕೈ ಕೊಟ್ಟು ಹೋದಾಗ ಪಕ್ಷ ಉಳಿಸಿಕೊಳ್ಳಲು ಅವರನ್ನು ಆಯ್ಕೆ ಮಾಡಿದ್ದೆವು. ಅವರನ್ನು ನಾನು ರಾಜಕೀಯವಾಗಿ ದುರುಪಯೋಗ ಮಾಡಿಕೊಂಡೆ ಅಂತ ಜನ ಮಾತಾಡಿಕೊಂಡರು. ಈ ಬಾರಿ ಚುನಾವಣೆ ಮೇಲೆ ಅನಿತಾ ಕುಮಾರಸ್ವಾಮಿಗೆ ಯಾವುದೇ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಹೆಚ್ ಡಿಕೆ, ಹಾಸನದ ರಾಜಕೀಯವೇ ಬೇರೆ, ಮಂಡ್ಯದ ರಾಜಕೀಯವೇ ಬೇರೆ. ಇವೆರಡನ್ನೂ ಒಟ್ಟಿಗೆ ಮಾಡಿ ನೋಡುವುದು ಬೇಡ ಎಂದರು.
ಇದನ್ನೂ ಓದಿ:ಕೆಆರ್ಪಿಪಿ ಪಕ್ಷದ ಪ್ರಣಾಳಿಕೆಯನ್ನು ಒಪ್ಪುವ ಪಕ್ಷಕ್ಕೆ ನಮ್ಮ ಬೆಂಬಲ: ಗಾಲಿ ಜನಾರ್ದನ್ ರೆಡ್ಡಿ