ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ಡಿ ರಾಜಕೀಯ ಲಾಭವಿಲ್ಲದೆ ಯಾರನ್ನೂ ಟೀಕಿಸುವುದಿಲ್ಲ. ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವುದು ಈ ಹಿನ್ನೆಲೆಯಲ್ಲಿಯೇ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಪರೋಕ್ಷವಾಗಿ ಹೆಚ್ಡಿಡಿ ವಿರುದ್ಧ ಗುಡುಗಿದರು.
ರಾಜಕೀಯ ಲಾಭವಿಲ್ಲದೆ ಹೆಚ್.ಡಿ.ಡಿ ಯಾರನ್ನೂ ಟೀಕಿಸುವುದಿಲ್ಲ: ಜಮೀರ್ ಅಹ್ಮದ್ - ಐಎಂಎ ಪ್ರಕರಣ
ಮಾಜಿ ಪ್ರಧಾನಿ ಹೆಚ್.ಡಿ.ಡಿ ರಾಜಕೀಯ ಲಾಭವಿಲ್ಲದೆ ಯಾರನ್ನೂ ಟೀಕಿಸುವುದಿಲ್ಲ. ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವುದು ಈ ಹಿನ್ನೆಲೆಯಲ್ಲಿಯೇ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಪರೋಕ್ಷವಾಗಿ ಹೆಚ್ಡಿಡಿ ವಿರುದ್ಧ ಗುಡುಗಿದರು.
ಮಾಜಿ ಸಚಿವ ಸಮೀರ್ ಅಹ್ಮದ್
ಕುಮಾರಸ್ವಾಮಿ ಅವರು ಎರಡು ಪಕ್ಷದ ಶಾಸಕರನ್ನು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಈ ರೀತಿ ಸರ್ಕಾರ ಪತನವಾಗುತ್ತಿರಲಿಲ್ಲ. ನಾನೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನದಲ್ಲಿದ್ದೆ. ಕುಮಾರಸ್ವಾಮಿ ಏನೆಲ್ಲಾ ಮಾಡಿದ್ದಾರೆ ಎಂದು ನನಗೂ ಗೊತ್ತಿದೆ ಎಂದು ಹೇಳಿದರು.
ಐಎಂಎ ಪ್ರಕರಣ: ಬಹುಕೋಟಿ ಹಗರಣ ಐಎಂಎ ತನಿಖೆಯನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೇ ಸಿಬಿಐಗೆ ವಹಿಸುವಂತೆ ನಾನು ಒತ್ತಾಯಪಡಿಸಿದ್ದೆ. ಈಗ ಬಿಜೆಪಿ ನೇತೃತ್ವದ ಬಿಎಸ್ವೈ ತೀರ್ಮಾನ ತೆಗೆದುಕೊಂಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.