ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಕೈಯಲ್ಲಿ ಅಧಿಕಾರ ಇದ್ದಾಗ ಯಾವುದಕ್ಕೂ ಹಿಂಜರಿಯಲ್ಲ. ಅದಕ್ಕಾಗಿಯೇ ನಮ್ಮ ಶಾಸಕರನ್ನು ಮುಂಜಾಗ್ರತಾ ಕ್ರಮವಾಗಿ ರೆಸಾರ್ಟ್ನಲ್ಲಿ ಇರಿಸುತ್ತಿದ್ದೇವೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಹೇಳಿದರು.
ಹೆಚ್ಡಿಕೆ ಅಧಿಕಾರಕ್ಕಾಗಿ ಏನ್ ಮಾಡೋಕೂ ಹಿಂಜರಿಯಲ್ಲ.. ಕೇಂದ್ರ ಸಚಿವ ಡಿವಿಎಸ್ ವಾಗ್ದಾಳಿ - undefined
ಬಿಜೆಪಿ ಶಾಸಕರನ್ನು ಮುಂಜಾಗ್ರತಾ ಕ್ರಮವಾಗಿ ರೆಸಾರ್ಟ್ಗೆ ಕಳುಹಿಸಲಾಗುತ್ತಿದೆ. ಸಿಎಂ ಹೆಚ್ಡಿಕೆ ಅಧಿಕಾರಕ್ಕಾಗಿ ಎಂಥಾ ಕೆಲಸಕ್ಕೂ ಹಿಂಜರಿಯಲ್ಲ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದರು.
![ಹೆಚ್ಡಿಕೆ ಅಧಿಕಾರಕ್ಕಾಗಿ ಏನ್ ಮಾಡೋಕೂ ಹಿಂಜರಿಯಲ್ಲ.. ಕೇಂದ್ರ ಸಚಿವ ಡಿವಿಎಸ್ ವಾಗ್ದಾಳಿ](https://etvbharatimages.akamaized.net/etvbharat/prod-images/768-512-3820154-thumbnail-3x2-bgbgl.jpg)
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ಕೇಂದ್ರ ಸಚಿವ ಡಿ ವಿ ಸದಾನಂದಗೌಡ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಅವರು, ರಾಜ್ಯದಲ್ಲಿ ಇಷ್ಟೊಂದು ಗೊಂದಲ, ಶಾಸಕರ ಅವಿಶ್ವಾಸವಿದ್ದಾಗಲೂ ಸಿಎಂ ರಾಜೀನಾಮೆ ನೀಡದೆ, ಮುಂದುವರೆಯುತ್ತಿರುವುದು ಸರಿಯಲ್ಲ. ಸಮ್ಮಿಶ್ರ ಸರ್ಕಾರ ಮತದಾರರ ನಂಬಿಕೆ ಕಳೆದುಕೊಂಡಿದೆ ಎಂದು ಟೀಕಿಸಿದರು.
ಸಮ್ಮಿಶ್ರ ಸರ್ಕಾರ ದಿನದೂಡುತ್ತಿದೆ. ಇದರಿಂದ ಜನತೆ ನಿತ್ಯವೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ರಾಜ್ಯದ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯ ಎಂದು ದೂರಿದರು ಸಚಿವ ಸದಾನಂದಗೌಡರು.