ಬೆಂಗಳೂರು:ನಿಖಿಲ್ಗೆ ಮದುವೆ ಮಾಡಬೇಕಾದ ಸಮಯ ಬಂದಿದೆ. ಮಾತುಕತೆ ಹಂತದಲ್ಲಿದ್ದು, ಸದ್ಯದಲ್ಲೇ ಹೇಳ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳುವ ಮೂಲಕ, ನಿಖಿಲ್ಗೆ ಹುಡುಗಿ ನೋಡಿರುವುದಾಗಿ ಹೆಚ್.ಡಿ.ಕೆ ಖಚಿತಪಡಿಸಿದ್ದಾರೆ.
ನಿಖಿಲ್ ಕುಮಾರ್ಸ್ವಾಮಿ ಮದುವೆ ಬಗ್ಗೆ ಗುಟ್ಟು ಬಿಟ್ಟ ಹೆಚ್ಡಿಕೆ! - nikhil kumaraswamy wedding
ನಿಖಿಲ್ಗೆ ಮದುವೆ ಮಾಡಬೇಕಾದ ಸಮಯ ಬಂದಿದೆ. ಮಾತುಕತೆ ಹಂತದಲ್ಲಿದ್ದು, ಸದ್ಯದಲ್ಲೇ ಹೇಳ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳುವ ಮೂಲಕ, ನಿಖಿಲ್ಗೆ ಹುಡುಗಿ ನೋಡಿರುವುದನ್ನು ಹೆಚ್.ಡಿ.ಕೆ ಖಚಿತಪಡಿಸಿದ್ದಾರೆ.
ಶಾಂಗ್ರಿಲಾ ಹೋಟೆಲ್ಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಗನ ಮದುವೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಬಹಳ ದಿನಗಳಿಂದ ಕುಟುಂಬದಲ್ಲಿ ಎಲ್ಲರೂ ನಿಖಿಲ್ಗೆ ಮದುವೆ ಮಾಡಬೇಕು ಅಂತ ಚರ್ಚೆ ನಡೆಸ್ತಿದ್ರು. ಉತ್ತಮ ಸಂಸ್ಕೃತಿ ಇರುವಂತಹ, ಉತ್ತಮ ಕುಟುಂಬದ ಹೆಣ್ಣು ಮಗಳನ್ನ ಹುಡುಕುತ್ತಾ ಇದ್ವಿ. ನಮ್ಮ ನಿರೀಕ್ಷೆಯಂತೆ ದೇವರು ಸಹಕಾರ ಕೊಟ್ಟಿದ್ದಾರೆ. ಅದೇ ರೀತಿಯ ಹುಡುಗಿ ಸಿಕ್ಕಿದ್ದು, ಸದ್ಯದಲ್ಲೇ ಎಲ್ಲವನ್ನೂ ತಿಳಿಸುತ್ತೇವೆಂದು ಹೇಳಿದ್ದಾರೆ.
ಇನ್ನೂ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಸಂಬಂಧಿ ಮನೆಗೆ ಹೋಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೃಷ್ಣಪ್ಪ ಅವರೊಂದಿಗಿನ ಸಂಬಂಧ ತುಂಬಾ ಹಳೆಯ ಆತ್ಮೀಯತೆ ಎಂದಿದ್ದಾರೆ.