ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಬೆಂಬಲಿಸಿದ ಸಮಸ್ತ ಜನತೆಗೆ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
ಜನತಾ ಕರ್ಫ್ಯೂ ಯಶಸ್ವಿಗೊಳಿಸಿದ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ ಎಚ್ಡಿಕೆ - ಜನತಾ ಕರ್ಫ್ಯೂಗೆ ಸ್ವಯಂ ನಿರ್ಬಂಧ
ಪ್ರಧಾನಿ ಮೋದಿ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಸ್ವಯಂ ನಿರ್ಬಂಧ ಹೇರಿಕೊಳ್ಳುವ ಮೂಲಕ, ಬೆಂಬಲಿಸಿದ ಸಮಸ್ತ ನಾಗರಿಕರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಭಿನಂದನೆ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಜನತೆಗೆ ಅಭಿನಂದನೆ ಸಲ್ಲಿಸಿರುವ ಹೆಚ್ಡಿಕೆ, ಸ್ವಯಂ ನಿರ್ಬಂಧ ಹೇರಿಕೊಳ್ಳುವ ಮೂಲಕ 'ಜನತಾ ಕರ್ಫ್ಯೂ' ಗೆ ಬೆಂಬಲಿಸಿದ ಸಮಸ್ತ ನಾಗರಿಕರಿಗೂ ಅಭಿನಂದನೆಗಳು. ಕೊರೊನಾ ವೈರಸ್ ಸೋಂಕು ತಗುಲದಂತೆ ಇನ್ನು ಕೆಲ ವಾರಗಳ ಕಾಲ ಸಂಯಮ ಕಾಯ್ದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಮನುಕುಲದ ಮಹಾಮಾರಿಯಾಗಿರುವ ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ, ಶುಚಿತ್ವ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಬೇಕಾಗಿದ್ದು, ಈ ಸೋಂಕನ್ನು ಎದುರಿಸಬೇಕಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತೋರುತ್ತಿರುವ ಅತೀವ ಜನಪರ ಕಾಳಜಿಗೆ ನನ್ನ ಪ್ರಣಾಮಗಳು ಎಂದು ಹೇಳಿದ್ದಾರೆ.