ಬೆಂಗಳೂರು/ ಉತ್ತರಾಖಂಡ:ಉತ್ತರಾಖಂಡದಲ್ಲಿರುವ ಭಾರತದ ಅತ್ಯಂತ ಎತ್ತರದ ತೆಹ್ರಿ ಡ್ಯಾಂಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಇಂದು ಭೇಟಿ ನೀಡಿದ್ರು.
ದೇಶದ ಅತ್ಯಂತ ಎತ್ತರದ ತೆಹ್ರಿ ಡ್ಯಾಂಗೆ ಹೆಚ್ಡಿ ದೇವೇಗೌಡ ಭೇಟಿ - ಸರ್ದಾರ್ ಸರೋವರ ಡ್ಯಾಂ
ವಿಶ್ವದ ಅತ್ಯಂತ ಎತ್ತರದ ಡ್ಯಾಂಗಳಲ್ಲಿ ಒಂದಾದ ಉತ್ತರಾಖಂಡದ ತೆಹ್ರಿ ಡ್ಯಾಂಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭೇಟಿ ನೀಡಿದ್ರು.
ವಿಶ್ವದ ಅತ್ಯಂತ ಎತ್ತರದ ಡ್ಯಾಂಗಳಲ್ಲೊಂದಾದ ತೆಹ್ರಿ ಅಣೆಕಟ್ಟನ್ನು ಭಾಗಿರಥಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಡ್ಯಾಂ ಒಂದು ಸಾವಿರ ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅದರ ಅಗಾಧತೆ ಮತ್ತು ಸುತ್ತಮುತ್ತಲಿನ ರಮ್ಯತೆ ನೋಡಿ ಗೌಡರು ಸಂತಸಗೊಂಡರು. ಇದೇ ವೇಳೆ ಅಲ್ಲಿನ ಅಧಿಕಾರಿಗಳ ಬಳಿ ಜಲವಿದ್ಯುತ್ ಉತ್ಪಾದನೆ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡರು.
ಗುಜರಾತ್‍ನ ಕೆವೆಡಿಯಾದ ನರ್ಮದಾ ನದಿ ಬಳಿ ನಿರ್ಮಾಣವಾಗಿರುವ ಸರ್ದಾರ್ ಸರೋವರ ಡ್ಯಾಂಗೆ ನಿನ್ನೆ ಭೇಟಿ ನೀಡಿದ್ದ ಗೌಡರು, ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ್ ಬಾಯಿ ಪಟೇಲರ ಪ್ರತಿಮೆ ವೀಕ್ಷಿಸಿ ಗೌರವ ನಮನ ಸಲ್ಲಿಸಿದ್ದರು. ಬಳಿಕ ಗುರುದೇಶ್ವರದತ್ತ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.