ಬೆಂಗಳೂರು: ಎರಡು ವರ್ಷದಿಂದ ಕಾಂಗ್ರೆಸ್ ಮುಖಂಡನೊಬ್ಬ ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷ ಒಡೆಯಲು ಬೀಡು ಬಿಟ್ಟಿದ್ದಾನೆ ಎಂದು ಹೆಚ್ ಡಿ ರೇವಣ್ಣ ಹೇಳಿದರು. ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಕುಮಾರಸ್ವಾಮಿ ಮತ್ತು ನನ್ನ ಸಂಬಂಧವನ್ನು ಯಾರ ಕೈಯಿಂದ ಒಡೆಯಲು ಸಾಧ್ಯವಿಲ್ಲ. ಕಳೆದ ಎರಡು ವರ್ಷದಲ್ಲಿ ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷವನ್ನು ಒಡೆಯಬೇಕೆಂದು ನಿರಂತರವಾಗಿ ಕಾಂಗ್ರೆಸ್ ಪಕ್ಷದ ಮುಖಂಡನೊಬ್ಬ ಹಾಸನಸಲ್ಲಿ ಬೀಡು ಬಿಟ್ಟಿದ್ದಾನೆ. ಬೆಳಗ್ಗೆಯಿಂದ ಎಲ್ಲರ ಮನೆಗೆ ತಿರುಗಿ ನಮ್ಮ ರಾಜ್ಯದ ಕಾಂಗ್ರೆಸ್ ಡಕೋಟಾ ಬಸ್ನ್ನು ಹತ್ತಿ ಎನ್ನುತ್ತಿದ್ದಾರೆ ಎಂದು ರೇವಣ್ಣ ಟಾಂಗ್ ನೀಡಿದರು.
ನಾನು ಯಾರಿಗೂ ಹೆದರುವುದಿಲ್ಲ. 25 ವರ್ಷದಿಂದ ದೇವೇಗೌಡರ ಆಶೀರ್ವಾದಿಂದ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ದೇವೇಗೌಡರ ಆಶೀರ್ವಾದದಿಂದ ನನ್ನನ್ನು ಏನು ಮಾಡಲು ಆಗುವುದಿಲ್ಲ. ದೇವೇಗೌಡರ ಮನಸ್ಸಿಗೆ ಎಳ್ಳಷ್ಟು ನೋವಾಗಬಾರದು. ನಮಗೆ ಇರುವುದು ಈ ದುಷ್ಟ ಶಕ್ತಿಯನ್ನು ಸಂಹಾರ ಮಾಡುವುದು. ದೇವೇಗೌಡರು ಹೇಳುವುದನ್ನು ನಾನು, ಭವಾನಿ, ಪ್ರಜ್ವಲ್, ಸೂರಜ್ ಪಾಲಿಸುತ್ತೇವೆ ಎಂದು ಹೇಳಿದರು.
ಭವಾನಿ ಶಕ್ತಿ ಏನೆಂಬುದು ಗೊತ್ತಿಲ್ಲ:ಹಾಸನದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಲೂಟಿ ಮಾಡಿದ್ದಾರೆ. ಹಾಸನದಲ್ಲಿ ಈ ಬಾರಿ ಏಳಕ್ಕೆ ಏಳೂ ಸ್ಥಾನ ನಾವು ಗೆಲ್ತೇವೆ. ದೇವೇಗೌಡರಿಗಾಗಿ ಯಾವುದೇ ತ್ಯಾಗಕ್ಕೂ ನಾನು ಸಿದ್ದ. ಕುಮಾರ ಸ್ವಾಮಿಯವರ ಮೇಲೆ ನನಗೆ ಯಾವುದೇ ಕೋಪ ಇಲ್ಲ. ದೇವೇಗೌಡರ ಆರೋಗ್ಯ ನಮಗೆ ಮುಖ್ಯ. ನಮ್ಮ ತಂದೆಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ದ. ಸೂರಜ್, ಪ್ರಜ್ವಲ್ ಕೂಡ ನಮ್ಮ ತಾತನಿಗಾಗಿ ಯಾವ ತ್ಯಾಗಕ್ಕೂ ಸಿದ್ದ ಎಂದು ಹೇಳಿದ್ದಾರೆ. ಅರಸೀಕೆರೆಯಲ್ಲಿ ಸಾಕಿದ ಗಿಣಿಯನ್ನ ಮಣಿಸಲು ಏನು ಬೇಕೋ ಅದನ್ನ ಮಾಡಿಸ್ತೇವೆ. ಭವಾನಿ ಶಕ್ತಿ ಏನು ಎಂದು ನಿಮಗೆ ಗೊತ್ತಿಲ್ಲ, ಅವರಿಗೆ ಸೀಟು ಕೊಟ್ಟಿದ್ರೆ ಗೆದ್ದು ತೋರಿಸುತ್ತಿದ್ರು. ಇದೀಗಾ ಭವಾನಿ ಬೇರಾವ ಕ್ಷೇತ್ರದಲ್ಲೂ ಸ್ಪರ್ಧಿಸುವುದಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.