ಕರ್ನಾಟಕ

karnataka

ETV Bharat / state

ಡಿಸಿಎಂ ಅಶ್ವತ್ಥ ನಾರಾಯಣ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ಟ್ವೀಟಾಸ್ತ್ರ ಪ್ರಯೋಗ.. - ಹೆಚ್.ಡಿ. ಕುಮಾರಸ್ವಾಮಿ ಲೆಟೆಸ್ಟ್ ನ್ಯೂಸ್

ರಾಜ್ಯದಲ್ಲಿ ಉದ್ಯೋಗಕ್ಕೆ ಬರವಿಲ್ಲ. ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆಗೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ
HD Kumarswamy

By

Published : Jan 11, 2020, 5:42 PM IST

ಬೆಂಗಳೂರು :ಟ್ವೀಟ್ ವಾರ್ ಮುಂದುವರೆಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಉದ್ಯೋಗಕ್ಕೆ ಬರವಿಲ್ಲ. ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆಗೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪಕೋಡ ತಯಾರಿಸಲು ಕೂಡ ಈರುಳ್ಳಿ ಕೊಳ್ಳಲು ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ ಎಂದು ಟಾಂಗ್ ನೀಡಿದ್ದಾರೆ.

ರಾಜ್ಯ ಸೇರಿ ದೇಶದಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಹೊಸ ಉದ್ಯೋಗ ಸೃಷ್ಟಿ ಒತ್ತಟ್ಟಿಗಿರಲಿ. ಇರುವ ಉದ್ಯೋಗ ಕಳೆದುಕೊಂಡು ಉದ್ಯೋಗಸ್ಥರು ಬೀದಿಗೆ ಬಿದ್ದಿದ್ದಾರೆ. ಉದ್ಯೋಗಾಕಾಂಕ್ಷಿಗಳು ಕಂಗಾಲಾಗಿದ್ದಾರೆ. ಇಂತಹ ಹಸಿ ಸುಳ್ಳುಗಳನ್ನು ಯಾರನ್ನು ಮೆಚ್ಚಿಸಲು ಹೇಳುತ್ತೀರಿ. ನಾಚಿಕೆ ಆಗಬೇಕು ನಿಮಗೆ. ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ ಅಥವಾ ಕಚೇರಿಗೆ ಕಳುಹಿಸಲೇ ಎಂದು ಪ್ರಶ್ನಿಸಿದ್ದಾರೆ.

For All Latest Updates

ABOUT THE AUTHOR

...view details