ಬೆಂಗಳೂರು: ಭವಾನಿಪುರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಭವಾನಿಪುರದಲ್ಲಿ ಸಿಎಂ ಬ್ಯಾನರ್ಜಿಗೆ ಭರ್ಜರಿ ಜಯ: ಶುಭಾಶಯ ಕೋರಿದ ಹೆಚ್ಡಿಕೆ - ಪಶ್ಚಿಮ ಬಂಗಾಳ ಉಪ ಚುನಾವಣೆ ಮಮತಾ ಬ್ಯಾನರ್ಜಿಗೆ ಜಯ
ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ 58 ಸಾವಿರದ 389 ಮತಗಳ ಅಂತರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ.
ಮಮತಾ ಬ್ಯಾನರ್ಜಿ ಕುಮಾರಸ್ವಾಮಿ
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಹೆಚ್ಡಿಕೆ, ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತ್ತು. ಭವಾನಿಪುರದಲ್ಲಿ ಮಮತಾ ಅವರು ಭಾರಿ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ ಎಂದಿದ್ದಾರೆ.
ಬಿಜೆಪಿ ರಾಜಕೀಯ ಸಂಕುಚಿತ ಮನೋಭಾವ ತೊರೆದು ಮಮತಾ ಅವರ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ ರಾಷ್ಟ್ರೀಯ ಪಕ್ಷವಾಗಿ ಆ ಪಕ್ಷದ ಘನತೆ ಉಳಿಯುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.