ಬೆಂಗಳೂರು:ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಮೈತ್ರಿ ಸರ್ಕಾರ ಇಂದು ಪತನಗೊಂಡಿದೆ. ವಿಶ್ವಾಸಮತಯಾಚನೆಗೂ ಮುನ್ನ ಬರೋಬ್ಬರಿ 2ಗಂಟೆಗಳ ಕಾಲ ಕುಮಾರಸ್ವಾಮಿ ಮಾತನಾಡಿದರು. ಈ ವೇಳೆ ತಮ್ಮ ಆಡಳಿತ ಅವಧಿಯಲ್ಲಿ ಮಾಡಿರುವ ಅನೇಕ ಅಭಿವೃದ್ಧಿ ಪರ ಕೆಲಸಗಳನ್ನ ರಾಜ್ಯದ ಜನರ ಮುಂದೆ ತೆರೆದಿಟ್ಟರು. ವಿಶ್ವಾಸಮತಯಾಚನೆ ವೇಳೆ ವಿಶ್ವಾಸಮತ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ಬಂದವು. ಹೆಚ್ ಡಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸ ಮತ ಪ್ರಸ್ತಾಪ ಬಿದ್ಹೋಗಿದೆ. ಹಾಗಾಗಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕುರ್ಚಿ ಕಳೆದುಕೊಳ್ಳಬೇಕಾಯಿತು.
14 ತಿಂಗಳ ದೋಸ್ತಿ ಸರ್ಕಾರ ಪತನ... ನಿರಾಸೆಯಿಂದ ಸದನದಿಂದ ಹೊರನಡೆದ ಹೆಚ್ಡಿಕೆ
ರಾಜ್ಯ ಸಮ್ಮಿಶ್ರ ಸರ್ಕಾರ ತಮ್ಮ ಬಹುಮತ ಕಳೆದುಕೊಂಡಿದ್ದು, ಸದನದಲ್ಲಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ವಿಶ್ವಾಸಮತ ಮಂಡನೆಯಲ್ಲಿ ವಿಫಲಗೊಳ್ಳುತ್ತಿದ್ದಂತೆ ನಿರಾಸೆಯಿಂದ ಸದನದಿಂದ ಹೊರನಡೆದರು.
ಹೆಚ್ಡಿಕೆ
ವಿಶ್ವಾಸಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸೋಲು ಕಾಣುತ್ತಿದ್ದಂತೆ ಹೆಚ್ಡಿಕೆ ಸದನದಿಂದ ನಿರಾಸೆಯಿಂದ ಹೊರನಡೆದರು. ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಬಿಜೆಪಿ ನಾಯಕರು ಹಾಗೂ ಯಡಿಯೂರಪ್ಪ ಸದನದೊಳಗೆ ವಿಕ್ಟರಿ ಸಿಂಬಲ್ ತೋರಿಸಿದರು.