ಕರ್ನಾಟಕ

karnataka

ETV Bharat / state

ಕನ್ನಡದ ಗ್ರಾಮಗಳ ಹೆಸರು ಮಲಯಾಳಂಗೆ ಮರುನಾಮಕರಣ ನಿಲ್ಲಿಸಿ: ಕೇರಳ ಸಿಎಂಗೆ ಹೆಚ್​ಡಿಕೆ ಪತ್ರ

ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಬಾಳ್ವೆಯಿಂದ ಕೂಡಿರುವ ವಾತಾವರಣವನ್ನು ಹದಗಡೆಸುವುದು ಸೂಕ್ತವಲ್ಲ ಎಂದು ಮಾಜಿ ಸಿಎಂ ಹೆಚ್​ಡಿಕೆ ಅಭಿಪ್ರಾಯಪಟ್ಟಿದ್ದಾರೆ.

hd-kumaraswamy-urges-pinarayi-vijayan-to-halt-process-of-renaming-villages-in-kerala
ಕನ್ನಡದ ಗ್ರಾಮಗಳ ಹೆಸರು ಮಲಯಾಳಂಗೆ ಮರುನಾಮಕರಣ ನಿಲ್ಲಿಸಿ: ಕೇರಳ ಸಿಎಂಗೆ ಹೆಚ್​ಡಿಕೆ ಪತ್ರ

By

Published : Jun 29, 2021, 2:09 AM IST

ಬೆಂಗಳೂರು :ಕಾಸರಗೋಡು ಮತ್ತು ಮಂಜೇಶ್ವರದಲ್ಲಿರುವ ಕನ್ನಡ ಭಾಷೆಯ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಮಾಧ್ಯಮಗಳ ಮೂಲಕ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಭಾಷೆಯಲ್ಲಿನ ಗ್ರಾಮಗಳ ಹೆಸರನ್ನು ಬದಲಿಸುವ ಬಗ್ಗೆ ಗಮನಕ್ಕೆ ಬಂದಿದೆ. ಈ ಪ್ರಕ್ರಿಯು ನಿಜಕ್ಕೂ ಸತ್ಯವೇ ಅಗಿದ್ದರೆ, ಇದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್​ಡಿಕೆ ಬರೆದಿರುವ ಪತ್ರ

ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಬಾಳ್ವೆಯಿಂದ ಕೂಡಿರುವ ವಾತಾವರಣವನ್ನು ಹದಗಡೆಸುವುದು ಸೂಕ್ತವಲ್ಲ ಎಂದು ಹೆಚ್​ಡಿಕೆ ಅಭಿಪ್ರಾಯಪಟ್ಟಿದ್ದು, ಕಾಸರಗೋಡು, ಕೇರಳದ ಭಾಗವಾಗಿದ್ದರೂ ದಶಕಗಳಿಂದ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಐಟಿ ಆ್ಯಕ್ಟ್​ ನಂತರ ಟ್ವಿಟರ್​ ಮತ್ತೊಂದು ಕ್ಯಾತೆ: ಪ್ರಕಟಿಸಿದ್ದ ಮ್ಯಾಪ್ ಡಿಲೀಟ್​​!

ಅಲ್ಲದೇ, ಈ ಪ್ರದೇಶದ ಜನರು ಯಾವಾಗಲು ಪರಸ್ಪರ ಭಾಷಾ ಪರಂಪರೆಯನ್ನು ಹೊಂದಿದ್ದಾರೆ. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ. ಹೆಸರು ಬದಲಾವಣೆಯು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಾದವಿದೆ. ಆದರೆ, ಹಳ್ಳಿಯ ಹೆಸರುಗಳು ಮೂಲ ಕನ್ನಡ ಪರಿಮಳವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಹೆಚ್​ಡಿಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details