ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.
'ಸಿಎಎ ಹೋರಾಟ, ಬಡತನ, ನಿರುದ್ಯೋಗ ಕಾಣದಂತೆ ಮೋದಿ ಯಾವ ಗೋಡೆ ಕಟ್ಟಿಸುತ್ತಾರೆ?' - ಟ್ವಿಟರ್ ನಲ್ಲಿ ಮೋದಿ ವಿರುದ್ಧ ಹೆಚ್ಡಿಕೆ ವ್ಯಂಗ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ ಮಾಡುವ ಮೂಲಕ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.
!['ಸಿಎಎ ಹೋರಾಟ, ಬಡತನ, ನಿರುದ್ಯೋಗ ಕಾಣದಂತೆ ಮೋದಿ ಯಾವ ಗೋಡೆ ಕಟ್ಟಿಸುತ್ತಾರೆ?' H.D Kumaraswamy](https://etvbharatimages.akamaized.net/etvbharat/prod-images/768-512-6110166-thumbnail-3x2-chai.jpg)
ಹೆಚ್.ಡಿ. ಕುಮಾರಸ್ವಾಮಿ
ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ? ಎಂದು ಟ್ವೀಟ್ ನಲ್ಲಿ ಹೆಚ್ಡಿಕೆ ಪ್ರಶ್ನಿಸಿದ್ದಾರೆ.
Last Updated : Feb 18, 2020, 10:53 AM IST