ಕರ್ನಾಟಕ

karnataka

ETV Bharat / state

ಬೆಂಗಳೂರು ಜನರಿಗೆ ನನ್ನಿಂದ ಮೋಸ ಸಾಬೀತಾದ್ರೆ ರಾಜಕೀಯ ನಿವೃತ್ತಿಗೆ ಸಿದ್ಧ: ಹೆಚ್​ಡಿಕೆ

ನಾನು ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಒಂದು ವೇಳೆ ನನ್ನ ಅವಧಿಯಲ್ಲಿ ಒತ್ತುವರಿ ಆಗಿರುವುದನ್ನು ಸಾಬೀತುಪಡಿಸಿದ್ರೆ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ
ಕುಮಾರಸ್ವಾಮಿ

By

Published : Sep 19, 2022, 2:22 PM IST

ಬೆಂಗಳೂರು: ನನ್ನ ಕಾಲದಲ್ಲಿ ಬೆಂಗಳೂರು ಜನತೆಗೆ ಏನಾದರೂ ಮೋಸ ಮಾಡಿದ್ದೇನೆ ಎಂದು ಸಾಬೀತು ಮಾಡಿದ್ರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೊನ್ನೆ ಸದನದಲ್ಲಿ ಜೆಡಿಎಸ್ ಆಡಳಿತ ಅವಧಿಯಲ್ಲಿ ಒತ್ತುವರಿ ಆಗಿದೆ ಎಂದು ಹೇಳಿದ್ದಾರೆ. ನಾನು ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಒಂದು ವೇಳೆ ಒತ್ತುವರಿ ಆಗಿರುವುದನ್ನು ಸಾಬೀತು ಪಡಿಸಿದ್ರೆ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಸ್ಪೀಕರ್​ಗೆ ಅವಕಾಶ ಕೇಳಿದ್ದೇನೆ: ದಾಖಲೆ ಬಿಡುಗಡೆ ಮಾಡೋಕೆ ಸ್ಪೀಕರ್​ಗೆ ಅವಕಾಶ ಕೇಳಿದ್ದೇನೆ. ಸ್ಪೀಕರ್​ಗೆ​ ಸೋಮವಾರ ಬೆಳಗ್ಗೆ ದೂರವಾಣಿ ಕರೆ ಮಾಡಿದ್ದೇನೆ. ನಾಳೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದರು.

ನಾನು ನ್ಯೂಸೆನ್ಸ್ ಮಾಡೋಕೆ ನೀಡಿರುವ ಹೇಳಿಕೆ ಅಲ್ಲ. ಸರ್ಕಾರಕ್ಕೆ ಮನವಿ ಮಾಡ್ತೇನೆ ಅವರು ಸಹಕಾರ ನೀಡಲಿ. ಸರ್ಕಾರದ ಒಂದು ತೀರ್ಮಾನದಿಂದ ನೂರಾರು ಕೋಟಿ ನಷ್ಟ ಆಗಿದೆ. ಅದನ್ನು ದಾಖಲೆ ಸಹಿತ ಇಡ್ತೇನೆ. ಮಂತ್ರಿಗಳು ದಾಖಲೆ ಬಿಡುಗಡೆ ಮಾಡ್ತಾ ಇದ್ದಾರೆ. ನಾನು ದಾಖಲೆಗಳೊಂದಿಗೆ ಚರ್ಚೆ ಮಾಡ್ತೀನಿ.

ಇದನ್ನೂ ಓದಿ:ನಾನಂತೂ ನನ್ನ ಅವಧಿಯಲ್ಲಿ ಬೆಂಗಳೂರಿಗೆ ಮಾರಕವಾಗುವ ತೀರ್ಮಾನ ಕೈಗೊಂಡಿಲ್ಲ: ಹೆಚ್​ಡಿಕೆ

ಡಿ ಕೆ ಶಿವಕುಮಾರ್ ವಿರುದ್ಧ ಇಡಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ರಾಜಕಾರಣಿ, ರೈತ, ಬ್ಯುಸಿನೆಸ್‌ಮೆನ್ ಅಂತ ಅಂದಿದ್ದಾರೆ. ನನಗೆ ನಂದೇ ಆದಂತಹ ವೃತ್ತಿಗಳಿವೆ. ನಾನು ಭ್ರಷ್ಟಾಚಾರ ಮಾಡಿಲ್ಲ. ಅದೆಲ್ಲ ಅವರೇ ಹೇಳಿದ್ದಾರೆ. ಅವರು ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ಇಡಿ ನೋಟಿಸ್ ಕೊಟ್ಟಿದ್ದರೂ, ಅದಕ್ಕೆ ಬಹುಶಃ ಅವರು ಉತ್ತರ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಹೊರಗೆ ಬರೋ ವಿಶ್ವಾಸ ಅವರಿಗೆ ಇದ್ದಾಗ, ನಾನು ಅದರ ಬಗ್ಗೆ ಟೀಕೆ ಮಾಡೋಕೆ ಹೋಗಲ್ಲ ಎಂದರು.

ABOUT THE AUTHOR

...view details