ಬೆಂಗಳೂರು: ದೇವೇಗೌಡರ ಮುಂದೆ ಸೋಮಣ್ಣ ಬಚ್ಚಾ.. ಜನತಾ ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು. ಆ ದಿನಗಳನ್ನು ಅವರು ನೆನಪು ಮಾಡಿಕೊಳ್ಳಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು ಇಲ್ಲದೇ ಇದ್ದಿದ್ದರೆ ಅವರು ಎನ್ಕೌಂಟರ್ ಆಗ್ತಿದ್ದರು.. ಹೆಚ್ಡಿಕೆ ಹೊಸ ಬಾಂಬ್ - HDK barrage against Somanna
ನಾನು ದೇವೇಗೌಡರು ಇಲ್ಲದೇ ಇದ್ದಿದ್ರೆ ಯಾವತ್ತೋ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಎನ್ಕೌಂಟರ್ ಆಗುತ್ತಿದ್ದರು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಮಾತನಾಡಿದ ಅವರು, ನಾನು ದೇವೇಗೌಡರು ಇಲ್ಲದೇ ಇದ್ದಿದ್ರೆ ಯಾವತ್ತೋ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಎನ್ಕೌಂಟರ್ ಆಗುತ್ತಿದ್ದರು. ಅದು ಪೊಲೀಸರಿಂದ ಅಲ್ಲ, ರೌಡಿಗಳಿಂದಲೇ ಆಗುತ್ತಿದರು. ಸಮಾಜಘಾತುಕ ಚಟುವಟಿಕೆಯಲ್ಲಿ ಯಾವತ್ತೋ ಹೋಗಬೇಕಾದವರಿಗೆ, ರಕ್ಷಣೆ ಸಿಕ್ಕಿದೆ ಅಂದರೆ ಅದು ನಮ್ಮ ಪಾರ್ಟಿಯಿಂದಲೇ. ಬದಲಾಗ್ತಾರೆ ಅಂತಾ 2013 ರಲ್ಲಿ ಒಂದು ಅವಕಾಶ ಕೊಟ್ವಿ ಅಂತ ಗೋಪಾಲಯ್ಯ ವಿರುದ್ಧ ಕಿಡಿಕಾರಿದರು.
ಎರಡನೇ ಬಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಅಭ್ಯರ್ಥಿ ಗಿರೀಶ್ ನಾಶಿ ಪರ ಕುಮಾರಸ್ವಾಮಿ ಅಬ್ಬರದ ಪ್ರಚಾರ ಮಾಡುವ ಮೂಲಕ, ಮತದಾರರ ಮನ ಸೆಳೆಯುವ ಪ್ರಯತ್ನ ಮಾಡಿದರು.