ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ನಪುಂಸಕ ಬಿಜೆಪಿ ಸರ್ಕಾರ: ಹೆಚ್.ಡಿ.ಕುಮಾರಸ್ವಾಮಿ - etv bharat karnataka

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮತ್ತು 25 ಜನ ಸಂಸದರು ತಮ್ಮ ಬೆನ್ನೆಲುಬು ಕಳೆದುಕೊಂಡಿದ್ದಾರೆ ಎಂದು ಹೆಚ್​.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

Etv Bharat
Etv Bharat

By

Published : Feb 7, 2023, 10:57 PM IST

ಬೆಂಗಳೂರು:ರಾಜ್ಯದಲ್ಲಿ ಅಧಿಕಾರದಲ್ಲಿರುವುದು ನಪುಂಸಕ ಬಿಜೆಪಿ ಸರ್ಕಾರ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರ ಹಾಗೂ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕರ್ನಾಟಕ ಬಿಜೆಪಿ ಪಾಲಿಗೆ ಇಂದು ಪಾಲಕರನ್ನು ಶಾಲೆಗೆ ಬರಮಾಡಿಕೊಳ್ಳುವ ದಿನದ ಹಾಗೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಈ ವೇಳೆ, ರಾಜ್ಯ ಬಿಜೆಪಿಯವರು ಅವರನ್ನು ಸ್ವಾಗತಿಸಿ ಚುನಾವಣೆ ಗೆಲ್ಲಲು ಅಣಿಯಾಗುವ ಉತ್ಸಾಹದಲ್ಲಿದ್ದಾರೆ ಎಂದಿದ್ದಾರೆ.

ನಮ್ಮ ಕರುನಾಡು ಬರಗಾಲ, ಪ್ರವಾಹದಿಂದ ತತ್ತರಿಸಿದಾಗೆಲ್ಲ ಮಾಯವಾಗುವ ಪ್ರಧಾನಿಯವರು, ಚುನಾವಣೆ ಹತ್ತಿರ ಬಂದ ತಕ್ಷಣ ಪ್ರತ್ಯಕ್ಷರಾಗುತ್ತಾರೆ. ಇಡೀ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕದ ಸಮಸ್ಯೆಗಳಿಗೆ ಕುರುಡಾಗಿ ವರ್ತಿಸುವವರು, ಈಗ ಮತ ಕೇಳಲು ಯಾವ ಮುಖ ಹೊತ್ತು ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಆದಾಯ ಮತ್ತು ಕಾರ್ಪೋರೆಟ್ ತೆರಿಗೆ, ಜಿಎಸ್​ಟಿಗಳನ್ನು ಕೇಂದ್ರದ ಖಜಾನೆಗೆ ಭರ್ತಿಯಾಗಿ ತುಂಬಿಸಿಕೊಳ್ಳಲು ಮಾತ್ರ ಕರ್ನಾಟಕ ಬೇಕು ಎನ್ನುವ ಹಾಗಾಗಿದೆ. ನಮ್ಮಿಂದ ಸಂಗ್ರಹವಾದ ತೆರಿಗೆಯಲ್ಲಿ ಕನಿಷ್ಠ ಪಾಲು ಸಿಗುವುದೇ ಕನಸಾಗಿದೆ. ಇನ್ನೂ ಸಮಪಾಲು ದೂರದ ವಿಷಯ. ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್​ನಂತೆ ಬಳಸುತ್ತಿದೆ. ಕರ್ನಾಟಕವು ಸೇರಿದಂತೆ ಎಲ್ಲ ರಾಜ್ಯಗಳ ಪ್ರಾದೇಶಿಕತೆಯ ಕತ್ತುಹಿಸುಕುವ ಕುತಂತ್ರದ ರಾಜಕೀಯ ಮುಂದುವರಿದಿದೆ. ರಾಜ್ಯಗಳ ಅಧಿಕಾರವನ್ನೆಲ್ಲ ಮೊಟಕುಗೊಳಿಸಿದ್ದಾಯ್ತು. ಈಗ, ಚುನಾವಣೆ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಕೆಲವು ಯೋಜನೆಗಳ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿಯವರೆ, ನಿಮ್ಮ ಮುಖವಾಡ ಕಳಚಿ ಬಹಳ ದಿನಗಳಾಗಿವೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಕರುನಾಡಿನ ಸಮಗ್ರ ಏಳ್ಗೆಗಾಗಿ ಸಿದ್ದಪಡಿಸಿರುವ ಪಂಚರತ್ನ ಯೋಜನೆಯು ಪಂಚರ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ. ವಿಡಿಯೋಕಾಲ್‌ನಲ್ಲಿ ಏನನ್ನೋ ನೋಡಿ ಹಲ್ಕಿರಿದು ಮಾತನಾಡಿ ಜನಪ್ರಿಯರಾದ ಸದಾನಂದಗೌಡರೇ, ವರ್ಚುವಲ್ ಜಗತ್ತಿನಿಂದ ಮೊದಲು ಹೊರಬನ್ನಿ. ಪಂಚರತ್ನ ಕಾರ್ಯಕ್ರಮವು ಈಗಾಗಲೇ ರಾಜ್ಯದ 6,700 ಕಿಲೋಮೀಟರ್ ಕ್ರಮಿಸಿದೆ. ಕಾರ್ಯಕ್ರಮ ನಡೆದಲ್ಲೆಲ್ಲ ನಮಗೆ ಸಿಗುತ್ತಿರುವ ಜನಸ್ಪಂದನೆ ನೋಡಿ, ರಾಜ್ಯ ಬಿಜೆಪಿ ಸರ್ಕಾರ ಪತರುಗುಟ್ಟಿದೆ. ವಿಡಿಯೊ ಕಾಲ್'ನಲ್ಲಿ ಮುಳುಗುವ ಸದಾನಂದಗೌಡರೆ, ಪಂಚರತ್ನ ಕಾರ್ಯಕ್ರಮವನ್ನು ಒಮ್ಮೆ ನೇರವಾಗಿ ನೋಡಬನ್ನಿ. ಆಗಲಾದರೂ, ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಕುಮಾರಸ್ವಾಮಿ ಹೇಳಿಕೆಗೆ ಖಂಡನೆ: ಕ್ಷಮೆಯಾಚನೆಗೆ ಸಚಿವ ಅಶ್ವತ್ಥ ನಾರಾಯಣ್ ಆಗ್ರಹ

ABOUT THE AUTHOR

...view details