'ಬಿಜೆಪಿ ಸಂಸ್ಥಾಪನಾ ದಿನ ಪ್ರಯುಕ್ತ ಜನರ ಕೈಯಲ್ಲಿ ಮೋದಿ ದೀಪ ಬೆಳಗಿಸುತ್ತಿದ್ದಾರಾ?': ಹೆಚ್ಡಿಕೆ - ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್
ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಮೋದಿ, ಏಪ್ರಿಲ್ 5ರ ದಿನವನ್ನೇ ದೀಪ ಬೆಳಗಿಸಲು ಆಯ್ದುಕೊಂಡಿರುವ ಹಿಂದಿನ ಮರ್ಮವೇನು? ದೀಪ ಹಚ್ಚುವ ಯೋಚನೆಯ ಹಿಂದಿನ ವೈಜ್ಞಾನಿಕ, ವೈಚಾರಿಕ ಕಾರಣವನ್ನು ಅವರು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ
ಬೆಂಗಳೂರು: ಬಿಜೆಪಿ ಪಕ್ಷದ ಸಂಸ್ಥಾಪನಾ ದಿನಾಚರಿಸಲು ಕೊರೊನಾ ಸಂಕಷ್ಟವನ್ನು ಪ್ರಧಾನಿ ಮೋದಿ ದುರುಪಯೋಗ ಮಾಡಿಕೊಂಡರೇ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜೊತೆಗೆ ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು ಎಂಬ ಪದೋಕ್ತಿ ಬರೆದು ಕೇಂದ್ರದ ನಡೆಯನ್ನು ಮಾಜಿ ಸಿಎಂ ಟೀಕಿಸಿದ್ದಾರೆ.
Last Updated : Apr 5, 2020, 11:20 AM IST