ಬೆಂಗಳೂರು:ಕೊರೊನಾ ಸೋಂಕು ಮುಕ್ತ ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯನ್ನು ಸೋಂಕು ಪೀಡಿತ ಕೆಂಪು ವಲಯವನ್ನಾಗಿ ಪರಿವರ್ತಿಸಿದ ಹೊಣೆಯನ್ನು ಯಾರು ಹೋರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಸಿರು ವಲಯದ ಜಿಲ್ಲೆಗಳಲ್ಲಿ ಕಾರ್ಖಾನೆಗಳ ಆರಂಭಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಮನಗರ ಹೊರತುಪಡಿಸಿ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಹಾಗೂ ದೂರದೃಷ್ಟಿಯ ಕೊರತೆ ಕಾರಣ ಎಂದು ಟೀಕಿಸಿದ್ದಾರೆ.