ಕರ್ನಾಟಕ

karnataka

ETV Bharat / state

ಜನರ ಸಾವಿನ ಮನೆಯಲ್ಲಿ ಚೆಲ್ಲಾಟವಾಡಬೇಡಿ: ಸರ್ಕಾರದ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - ಸರ್ಕಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ

ಏರ್ಪೋರ್ಟ್‌ಗೆ 'ನಮ್ಮ ಮೆಟ್ರೋ' ಸೌಲಭ್ಯ ಕಲ್ಪಿಸುವ 2ನೇ ಹಂತ ಮತ್ತು 3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ರಾಜ್ಯ ಸರ್ಕಾರ ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ನೀಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

hd kumaraswamy
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

By

Published : Apr 22, 2021, 11:41 AM IST

ಬೆಂಗಳೂರು: ಕೊರೊನಾದಿಂದ ಜನ ಸಾಯುತ್ತಿರುವಾಗ ಪ್ರಚಾರಕ್ಕಾಗಿ ಜಾಹೀರಾತು ಕೊಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜನರ ಸಾವಿನ ಮನೆಯಲ್ಲಿ ಚೆಲ್ಲಾಟವಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ವಿಡಿಯೋ ಬಿಡುಗಡೆ ಮಾಡಿದ್ದಾರೆ. ಏರ್ಪೋರ್ಟ್‌ಗೆ 'ನಮ್ಮ ಮೆಟ್ರೋ' ಸೌಲಭ್ಯ ಕಲ್ಪಿಸುವ ಎರಡನೇ ಹಂತ ಮತ್ತು ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ರಾಜ್ಯ ಸರ್ಕಾರ ಪತ್ರಿಕೆಯ ಮುಖಪುಟಗಳಲ್ಲಿ ಜಾಹೀರಾತು ನೀಡಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

'ಸಾವಿನ ಮನೆಯಲ್ಲಿ ಇದು ಅಗತ್ಯವಿತ್ತೇ?'

ಸಾವಿನ ಮನೆಯಲ್ಲಿ ನಾವು ಈಗ ಇದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಾಹೀರಾತಿಗೆ ಕೋಟಿ ಕೋಟಿ ಹಣ ಖರ್ಚು ಮಾಡಿ ಕೇಂದ್ರ ಸರ್ಕಾರಕ್ಕೆ ಶುಭಾಶಯ ಕೋರುವ ಅಗತ್ಯ ಇದೆಯೇ? ಎಂದರು.

'ಕೇಂದ್ರ ಕೊಟ್ಟಿರುವುದು ಭಿಕ್ಷೆಯಲ್ಲ'

ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿರುವುದು ಭಿಕ್ಷೆಯಲ್ಲ ಎಂದ ಅವರು, ರಾಜ್ಯದ ಜನತೆ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ರಾಜ್ಯದಲ್ಲಿ ಚಿಕಿತ್ಸೆಗೆ ಬೆಡ್​ಗಳಿಲ್ಲ, ಆಕ್ಸಿಜನ್ ಕೊರತೆಯಿದೆ, ಔಷಧಿ ಇಲ್ಲ, ಇದರಿಂದ ಜನ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಮೂರ್ಖ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ಟೀಕಿಸಿದರು.

ಇದನ್ನೂ ಓದಿ:ಕೊರೊನಾದಿಂದ ಸಿಎಂ ಬಿಎಸ್​ವೈ ಗುಣಮುಖ: ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್

ABOUT THE AUTHOR

...view details