ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ನಮ್ಮ ದೇಶದಲ್ಲಿ ಭಯ ಮತ್ತು ಅನಿಶ್ಚಿತತೆ ಆವರಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆತಂಕ ವ್ಯಕ್ತಪಡಿಸಿದ್ದಾರೆ.
ಆಫ್ಫನ್ ಬೆಳವಣಿಗೆಯಿಂದ ದೇಶದಲ್ಲಿ ಭಯ ಮತ್ತು ಅನಿಶ್ಚಿತತೆ ಆವರಿಸಿದೆ: ಹೆಚ್ಡಿಡಿ ಕಳವಳ - ಅಫ್ಘಾನಿಸ್ತಾನ ತಾಲಿಬಾನ್ ವಶ
ತಾಲಿಬಾನ್ ಉಗ್ರರ ಕಪಿಮುಷ್ಠಿಗೆ ಸಿಲುಕಿರುವ ಅಘ್ಫಾನಿಸ್ತಾನದ ಬೆಳೆವಣಿಗೆಯಿಂದ ಭಾರತ ದೇಶದಲ್ಲಿ ಭಯ ಮತ್ತು ಅನಿಶ್ಚಿತತೆ ಆವರಿಸಿದ್ದು, ನಮ್ಮ ನೆರೆಹೊರೆಯಲ್ಲಿ ಸ್ನೇಹ ಮತ್ತು ಶಾಂತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಕ್ರಿಯಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಟ್ಟೀಟ್ ಮಾಡಿದ್ದಾರೆ.
ಹೆಚ್ಡಿಡಿ
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಅಫ್ಘಾನಿಸ್ತಾನದ ಘಟನೆಗಳಿಂದ ನಮ್ಮ ದೇಶದಲ್ಲಿ ಭಯ ಹಾಗೂ ಅನಿಶ್ಚಿತತೆ ಆವರಿಸಿದೆ. ಇದು ಭಾರತ ಮತ್ತು ಇತರ ದೇಶಗಳಿಗೂ ಕಠಿಣ ಕ್ಷಣವಾಗಿದೆ. ನಮ್ಮ ನೆರೆಹೊರೆಯಲ್ಲಿ ಸ್ನೇಹ ಮತ್ತು ಶಾಂತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸ್ವತಂತ್ರ ನೀತಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ನಾವು ಮಾನವೀಯ ರೀತಿಯಲ್ಲಿ ಪ್ರತಿಕ್ರಿಯಿಸಬೇಕು' ಎಂದು ಬರೆದು ಪೋಸ್ಟ್ ಮಾಡಿದ್ದಾರೆ.