ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಹಿಂಸೆ ತಾಳಲಾರದೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ರು.. ದೇವೇಗೌಡ ವಾಗ್ದಾಳಿ - JP Bhavan

ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ನಾಯಕರೇ ಕಾರಣ. ಕಾಂಗ್ರೆಸ್ ಕೊಡುತ್ತಿದ್ದ ನೋವು ಸಹಿಸಿಕೊಂಡು ನಾನು ಊಟ ಮಾಡ್ತಿದ್ದೆ. ಕಾಂಗ್ರೆಸ್ ಹಿಂಸೆ ಸಹಿಸಲಾರದೇ ಕುಮಾರಸ್ವಾಮಿ ನನ್ನ ಬಳಿ ಕಣ್ಣೀರು ಹಾಕಿದ್ದರು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡ ವಾಗ್ದಾಳಿ

By

Published : Aug 23, 2019, 1:44 PM IST

ಬೆಂಗಳೂರು : ಕಾಂಗ್ರೆಸ್ ಕೊಟ್ಟ ಹಿಂಸೆಗೆ ಹೆಚ್ ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ರು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರ ಹಿಂಸೆ ತಾಳಲಾರದೇ ಕಣ್ಣೀರು ಹಾಕಿ ರಾಜೀನಾಮೆ ಕೊಡ್ತೀನಿ ಅಂತಾ ನನ್ನ ಬಳಿ ಕುಮಾರಸ್ವಾಮಿ ಬಂದಿದ್ದರು. ಪ್ರಾದೇಶಿಕ ಪಕ್ಷವಾಗಿ ನಾವೇ ಹೊರ ಬಂದರೆ ದೇಶದಲ್ಲಿ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ನಾನೇ ಅವರಿಗೆ ಸಹಿಸಿಕೊಂಡು ಹೋಗು ಅಂತಾ ಹೇಳಿದ್ದೆ. ಮಾಧ್ಯಮಗಳು ಹಾಗೂ ಕಾಂಗ್ರೆಸ್ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ ಎಂದರು.

ಮೈತ್ರಿ ಸರ್ಕಾರ ನಾವು ಬೀಳಿಸಿದ್ರೇ ಮತ್ತೆ ನಮ್ಮ ಮೇಲೆ ಆರೋಪ ಮಾಡ್ತಾರೆ ಅಂತಾ ಸುಮ್ಮನೆ ಇದ್ದೆ. ಆದ್ದರಿಂದ ಸರ್ಕಾರ ಹೋದ ಮೇಲೆ ಇದೆಲ್ಲವನ್ನೂ ಹೇಳುತ್ತಿದ್ದೇನೆ. ಕುಮಾರಸ್ವಾಮಿಗೆ ಕಾಂಗ್ರೆಸ್‌ನವರು ನೀಡಿದ ಕಾಟ ಎಷ್ಟೆಂದು ನನಗೆ ಗೊತ್ತು. ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ನಾಯಕರೇ ಕಾರಣ. ಕಾಂಗ್ರೆಸ್ ಕೊಡುತ್ತಿದ್ದ ನೋವು ಸಹಿಸಿಕೊಂಡು ನಾನು ಊಟ ಮಾಡ್ತಿದ್ದೆ. ಸಿದ್ದರಾಮಯ್ಯ ‌ಮೊದಲಿನಿಂದಲೂ ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊಂದಿದ್ದರು. ಹೀಗೆ ಬಹಳಷ್ಟು ವಿಷಯಗಳು ಮಾತಾಡಬಹುದು. ಈ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ ಎಂದು ಹೇಳಿದರು.

ಸರ್ಕಾರವನ್ನು ಅವರೇ ತೆಗೆದರು, ಅದಕ್ಕೆ ಈಗ ಮಾತನಾಡುತ್ತಿದ್ದೇನೆ. ನಾನೇ ಸರ್ಕಾರ ತೆಗೆದರೆ ದೇವೇಗೌಡರೇ ಸರ್ಕಾರ ತೆಗೆದ್ರು ಅಂತಾ ಹೇಳ್ತಿದ್ರು. ಕಾಂಗ್ರೆಸ್ ಕೊಟ್ಟ ಎಲ್ಲಾ ನೋವು, ಹಿಂಸೆ ನಾವು ಸಹಿಸಿಕೊಂಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ABOUT THE AUTHOR

...view details