ಬೆಂಗಳೂರು:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ನಾಡಿನ ಸರ್ವರಿಗೂ 150ನೇ ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.
ಪ್ರೀತಿಯಿಂದ ಯುದ್ಧ ಗೆಲ್ಲುವುದನ್ನು ತೋರಿಸಿದ್ದು ಗಾಂಧೀಜಿ... ದೊಡ್ಡ ಗೌಡರ ಟ್ವೀಟ್ - ಗಾಂಧಿ ಜಯಂತಿಗೆ ಶುಭಾಶಯ ಕೋರಿದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಶುಭಾಶಯ ಕೋರಿದ್ದಾರೆ.

ನಮ್ಮ ದೇಶದ ಪಿತಾಮಹನಿಗೆ 150ನೇ ಜನ್ಮ ದಿನಾಚರಣೆಯ ಗೌರವ. ಪ್ರೀತಿಯು ಯುದ್ದವನ್ನು ಹೇಗೆ ಗೆಲ್ಲಬಹುದೆಂದು ಜಗತ್ತಿಗೆ ತೋರಿಸಿದ ಮಹಾತ್ಮರು, ನಾವು ನೋಡಲು ಬಯಸುವ ಬದಲಾವಣೆಯಾಗಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಎಂದು ಮಾಜಿ ಪ್ರಧಾನಿ ಗಾಂಧಿ ಜಯಂತಿಗೆ ಶುಭ ಕೋರಿ ಟ್ವಿಟ್ ಮಾಡಿದ್ದಾರೆ.
ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು. ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.