ಕರ್ನಾಟಕ

karnataka

ETV Bharat / state

ಮಹಾಶಿವರಾತ್ರಿ ಶುಭಾಶಯ ಕೋರಿದ ಹೆಚ್​ಡಿಡಿ-ಹೆಚ್​ಡಿಕೆ - ಬೆಂಗಳೂರು ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ಶಿವರಾತ್ರಿ ಪ್ರಯುಕ್ತ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಡಿನ ಜನತೆಗೆ ಶುಭ ಕೋರಿದ್ದಾರೆ.

Bangalore
ಮಹಾಶಿವರಾತ್ರಿ ಶುಭಾಶಯ ಕೋರಿದ ಹೆಚ್​ಡಿಡಿ-ಹೆಚ್​ಡಿಕೆ

By

Published : Mar 11, 2021, 12:01 PM IST

ಬೆಂಗಳೂರು:ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶುಭಾಶಯ ಕೋರಿದ್ದಾರೆ.

ಶಿವ ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನಸ್ಸಿನ ಪ್ರತೀಕವಾಗಿದ್ದು, ಎಲ್ಲಾ ಆಡಂಬರಗಳಿಂದ ಮುಕ್ತವಾಗಿರುವ ಅಮೋಘ ಶಕ್ತಿ ಸ್ವರೂಪಿ. ಈ ಮಹಾ ಶಿವರಾತ್ರಿಯಂದು ಎಲ್ಲರಿಗೂ ಶಿವನ ಆಶೀರ್ವಾದ ದೊರಕಲಿ. ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಹೆಚ್.ಡಿ. ದೇವೇಗೌಡ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ವಿಶ್ವದ ಸಕಲವೂ ಆಗಿರುವ ಶಿವನ ಆರಾಧನೆಯ ದಿನವಾದ ಈ ದಿನ ಎಲ್ಲರಿಗೂ ಶುಭಾಶಯ ಕೋರುತ್ತೇನೆ. ವಿಶ್ವದ ಹಿತಕ್ಕಾಗಿ ನಂಜನ್ನೇ ಉಂಡ ನಂಜುಂಡನ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಆಶಿಸಿದ್ದಾರೆ.

ಓದಿ:ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭ ಕೋರಿದ ಸಿಎಂ ಬಿಎಸ್​ವೈ, ಕಟೀಲ್

ABOUT THE AUTHOR

...view details