ಬೆಂಗಳೂರು: ಮಹಾನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 511ನೇ ಜಯಂತ್ಯುತ್ಸವಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಶುಭಾಶಯ ಕೋರಿದ್ದಾರೆ.
ಕೆಂಪೇಗೌಡರ 511ನೇ ಜಯಂತಿಗೆ ಶುಭ ಕೋರಿದ ದೇವೇಗೌಡ - H D deve gowdha tweet
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 511ನೇ ಜಯಂತ್ಯುತ್ಸವಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಶುಭಾಶಯ ಕೋರಿದ್ದಾರೆ.
![ಕೆಂಪೇಗೌಡರ 511ನೇ ಜಯಂತಿಗೆ ಶುಭ ಕೋರಿದ ದೇವೇಗೌಡ Deve gowdha](https://etvbharatimages.akamaized.net/etvbharat/prod-images/768-512-10:37:06:1593234426-kn-bng-01-hdd-tweet-script-7208083-27062020102536-2706f-1593233736-458.jpg)
Deve gowdha
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿ, ಕೋಟೆ, ಪೇಟೆಗಳನ್ನು ನಿರ್ಮಿಸಿ, ಕೆರೆಕಟ್ಟೆಗಳನ್ನು ಕಟ್ಟಿಸಿ, ನಾಡಿನ ಜನಮಾನಸದಲ್ಲಿ ಸದಾ ಅಚ್ಚಳಿಯದೆ ಕೆಂಪೇಗೌಡರು ಉಳಿದಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ನಿರ್ಮಾತೃ ಸಮರ ವೀರ ನಾಡಪ್ರಭು ಕೆಂಪೇಗೌಡರ ಜಯಂತಿಯಾದ ಇಂದು ಅವರಿಗೆ ನನ್ನ ಗೌರವ ನಮನ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.